ದೇಶೀಯ ಪಿಸ್ತೂಲನ್ನೇ ಬಳಸಿದ್ದ ಗೌರಿ, ಕಲಬುರ್ಗಿ ಹಂತಕರು

ಬೆಂಗಳೂರು : ಸೆಪ್ಟೆಂಬರ್ 5ರಂದು ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ಎರಡು ವರ್ಷಗಳ ಹಿಂದೆ  ನಡೆದ ವಿದ್ವಾಂಸ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕೊಲೆಗಾರರು  7.65 ಎಂಎಂ ದೇಶೀಯ ನಿರ್ಮಿತ ಪಿಸ್ತೂಲನ್ನೇ ಉಪಯೋಗಿಸಿದ್ದಾರೆಂಬುದು ಗೌರಿ  ಹತ್ಯಾ ಸ್ಥಳದಲ್ಲಿ ದೊರೆತಿದ್ದ ಗುಂಡುಗಳ ಆರಂಭಿಕ ವಿಧಿವಿಜ್ಞಾನ ಪರಿಶೀಲನೆಯಿಂದ ಪತ್ತೆಯಾಗಿದೆ. ಈ ಮಾಹಿತಿಯನ್ನು ಈಗಾಗಲೇ ಗೌರಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ನೀಡಲಾಗಿದೆಯೆಂದು ಗೌರಿ ಹಾಗೂ ಕಲಬುರ್ಗಿ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಪ್ರತ್ಯೇಕ ತನಿಖಾ ತಂಡಗಳ ಮೂಲಗಳು ತಿಳಿಸಿವೆ.