ಗೌರಿ ಡಿಸೈನಿಗೆ ಶಾರೂಕ್ ಫಿದಾ

ಕಿಂಗ್ ಆಫ್ ರೊಮ್ಯಾನ್ಸ್ ಶಾರೂಕ್ ಖಾನ್ ಹಾಗೂ ಗೌರಿಯದ್ದು ಬಾಲಿವುಡ್ಡಿನ ಅನುಪಮ ಜೋಡಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಿಬ್ಬರೂ ಇಲ್ಲಿಯವರೆಗೂ ಒಬ್ಬರಿಗೊಬ್ಬರು ಸಪೋರ್ಟ್ ನೀಡುತ್ತಲೇ ಬಂದಿದ್ದಾರೆ. ಶಾರೂಕ್ ಗೌರಿಯನ್ನು ಹುಚ್ಚನಂತೆ ಪ್ರೀತಿಸಿ ಮದುವೆಯಾಗಿದ್ದು ಮಾತ್ರವಲ್ಲದೇ ಈಗಲೂ ಪತ್ನಿ ಮೇಲೆ ಅದೇ ರೀತಿಯ ಪ್ರೀತಿ ಜೊತೆಗೇ ಅಭಿಮಾನ ಹೊಂದಿದ್ದಾನೆ. ಆಕೆಯ ಪ್ರತಿಯೊಂದು ಕಾರ್ಯದಲ್ಲೂ ಶಾರೂಕ್ ಸಪೋರ್ಟ್ ಮಾಡುತ್ತಾನೆ. ಅದಕ್ಕೆ ಲೇಟೆಸ್ಟ್ ಉದಾಹರಣೆಯೆಂದರೆ ಶಾರೂಕ್ ಗೌರಿಯ ಡಿಸೈನನ್ನು ಬಹುವಾಗಿ ಮೆಚ್ಚಿಕೊಂಡು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ ವೀಡಿಯೋ.

ಗೌರಿ ಈಗ ಇಂಟೀರಿಯರ್ ಡಿಸೈನಿಂಗಿನಲ್ಲಿ ಭಾರೀ ಪರಿಣಿತಿ ಹೊಂದಿದ್ದು ರಣಬೀರ್ ಕಪೂರ್ ಮನೆ, ಕರಣ್ ಜೋಹರ್ ಮಕ್ಕಳ ಬೆಡ್ರೂಮ್ ಸಮೇತ ಹಲವು ಸೆಲೆಬ್ರಿಟೀಸ್ ಮನೆ ಹಾಗೂ ಆಫೀಸುಗಳಿಗೆ ಆಕೆ ಇಂಟೀರಿಯರ್ ಡಿಸೈನ್ ಮಾಡಿದ್ದಾಳೆ. ಗೌರಿಯ ಹೊಸ ಸ್ಟೋರ್ `ಗೌರಿ ಖಾನ್ ಡಿಸೈನ್ಸ್’ ಅಂತೂ ಈಗ ಸೆಲೆಬ್ರಿಟೀಸ್‍ಗಳಿಗೆ ಒಂದು ಪಿಕ್ನಿಕ್ ಸ್ಪಾಟ್ ಆಗಿ ಬಿಟ್ಟಿದೆ. ಆಲಿಯಾ ಭಟ್, ರಣಬೀರ್ ಕಪೂರ್ ಮೊದಲಾದ ತಾರೆಗಳು ಮಾತ್ರವಲ್ಲದೇ ನೀತಾ ಅಂಬಾನಿ ಕೂಡಾ ಅಲ್ಲಿಗೆ ಭೇಟಿಯಿತ್ತು ಗೌರಿ ಜೊತೆ ಸೆಲ್ಫೀ ತೆಗೆದುಕೊಂಡವರೇ. ಶಾರೂಕನಿಗಂತೂ ತನ್ನ ಮಡದಿಯ ಈ ಡಿಸೈನಿಂಗ್ ಸ್ಕಿಲ್ ಬಗ್ಗೆ ಭಾರೀ ಹೆಮ್ಮೆ. ಅಕ್ಟೋಬರ್ 8ಕ್ಕೆ ಗೌರಿಯ ಹುಟ್ಟುಹಬ್ಬವಿತ್ತು. ಆ ದಿನ ಶಾರೂಕ್ ಆಕೆಯ ಸ್ಟೋರಿನ ಒಳಾಂಗಣದ ವೀಡಿಯೋವನ್ನು ಅಪ್ಲೋಡ್ ಮಾಡಿ ಇಂಟೀರಿಯರ್ ಡಿಸೈನಿಂಗಿನಲ್ಲಿ ಗೌರಿಗಿರುವ ಆಸಕ್ತಿ ಹಾಗೂ ಪರಿಶ್ರಮದ ಬಗ್ಗೆ ಮನಸಾರೆ ಹೊಗಳಿದ್ದಾನೆ.

ಅಂದ ಹಾಗೆ ಗೌರಿಯ ಡಿಸೈನಿಂಗ್ ಈಗ ವಿದೇಶದಲ್ಲೂ ಫೇಮಸ್ ಆಗುತ್ತಿದೆ. ಲಂಡನ್ನಿನ ಎ ಲಿಸ್ಟರ್ ಕ್ಲಬ್ ಒಂದು ಮುಂಬೈನಲ್ಲಿ ಇದೇ ತಿಂಗಳ ಕೊನೆಯಲ್ಲಿ ಬಹುದೊಡ್ಡ ಪಾರ್ಟಿಯೊಂದನ್ನು ಹೋಸ್ಟ್ ಮಾಡಲಿದ್ದು ಆ ದಿನದ ಇಂಟೀರಿಯರ್ ಡಿಸೈನಿನ ಸಂಪೂರ್ಣ ಜವಾಬ್ದಾರಿ ಗೌರಿಗೆ ವಹಿಸಿದ್ದಾರೆ.