ರಾಘವೇಶ್ವರ ವಿರುದ್ಧ ಅನುಮಾನದ ಮೊನೆ

ಪ್ರೇಮಲತಾ ದಿವಾಕರ್ ದಂಪತಿ ದೂರು

 ಬೆಂಗಳೂರು : ಇತ್ತೀಚೆಗೆ ಹತ್ಯೆಗೀಡಾದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಲಂಕೇಶ್ ಪತ್ರಿಕೆಯಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಿರುವುದರಿಂದ ಈ ಹಿನ್ನೆಲೆಯಲ್ಲೂ ಅವರನ್ನು ಸುಪಾರಿ ಹಂತಕರ ಮೂಲಕ ಮುಗಿಸಲಾಗಿರುವ ಸಾಧ್ಯತೆಯಿರುವ ಬಗ್ಗೆ ಆರೋಪಿಸಿ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಠದ ಮಾಜಿ ರಾಮಕಥಾ ಗಾಯಕಿ ಪ್ರೇಮಲತಾ ಮತ್ತವರ ಪತಿ ದಿವಾಕರ ಶಾಸ್ತ್ರಿ ಈಗಾಗಲೇ ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿ ಈ ನಿಟ್ಟಿನಲ್ಲಿಯೂ ತನಿಖೆ ನಡೆಸುವಂತೆ ಕೋರಿದೆ.

ಗೌರಿ ಲಂಕೇಶ್ ಪತ್ರಿಕೆಯಲ್ಲಿ ಸ್ವಾಮಿ ವಿರುದ್ಧ ಸರಣಿ ಲೇಖನಗಳು ಪ್ರಕಟವಾದ ನಂತರ ಪತ್ರಿಕೆಯ ವಿರುದ್ಧ ಮಾನನಷ್ಟ ಪ್ರಕರಣವೂ ದಾಖಲಾಗಿತ್ತು. ಇದೀಗ ಈ

ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಟ್ ಅಧಿಕಾರಿಗಳು ಸ್ವಾಮಿಗೆ ನೊಟೀಸ್ ನೀಡಿ ತಮ್ಮ ಹೇಳಿಕೆ ದಾಖಲಿಸಲು ಹೇಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಪ್ರೇಮಲತಾ ದಂಪತಿ ತಮ್ಮ ದೂರಿನೊಂದಿಗೆ ಕೆಲ ದಾಖಲೆಗಳನ್ನೂ ಒದಗಿಸಿದ್ದಾರೆ

ಪತ್ರಕರ್ತೆ ಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಸ್ವಾಮಿಯನ್ನು ಶಾಮೀಲಾಗಿಸಲು ನಡೆಸಲಾಗುತ್ತಿರುವ ಪ್ರಯತ್ನಗಳಿಗೆ ಮಠ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.