ಬದಿಯಡ್ಕ ಪೇಟೆ ತ್ಯಾಜ್ಯ ಸಮಸ್ಯೆ

ಬದಿಯಡ್ಕ ಪೇಟೆ ಸುತ್ತಮುತ್ತ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಬದಿಯಡ್ಕ ಬಸ್ ನಿಲ್ದಾಣದ ಹಿಂಭಾಗ ಮುಖ್ಯ ವೃತ್ತದ ಪರಿಸರ ಮಾರುಕಟ್ಟೆ ಪ್ರದೇಶ ಟೆಂಪೋ ನಿಲ್ದಾಣ ಬಸ್ ನಿಲ್ದಾಣ ಬಳಿ ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿ ಕಸ ಕಡ್ಡಿಗಳು ಹಾಗೂ ತ್ಯಾಜ್ಯಗಳು ರಾಶಿ ಬಿದ್ದಿವೆ ಬೀದಿನಾಯಿಗಳು ಅದನ್ನು ಕೆದಕುವುದರಿಂದ ಅವು ಇಡೀ ಪೇಟೆಗೆ ವಿಸ್ತರಿಸಲ್ಪಡುತ್ತದೆ ಎಂದು ನಾಗರಿಕರ ಅಳಲು ಕೆಲವೊಂದು ಮಾಂಸದಂಗಡಿಗಳು ಇಲ್ಲಿ ತ್ಯಾಜ್ಯ ತಂದು ಅಲ್ಲಲ್ಲಿ ಎಸೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಆದ್ದರಿಂದ ಇನ್ನಾದರೂ ಪೇಟೆ ಸುತ್ತಮುತ್ತ ಬೇಕಾಬಿಟ್ಟಿ ಕಸ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿ ತ್ಯಾಜ್ಯ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ

  • ಸುಂದರಂ  ಬದಿಯಡ್ಕ

LEAVE A REPLY