ಬ್ರಹ್ಮಾವರ ಬಸ್ ನಿಲ್ದಾಣ ಸುತ್ತಮುತ್ತ ಕಸದ ರಾಶಿ

ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ದಿನಂಪ್ರತಿ ಲೆಕ್ಕವಿಲ್ಲದಷ್ಟು ಬಸ್ಸುಗಳು ಬೇರೆ ಬೇರೆ ಊರುಗಳಿಗೆ ಹೋಗಲು ನಿಲ್ದಾಣಕ್ಕೆ ಬರುತ್ತಿವೆ. ಬಸ್ಸಿನಲ್ಲಿರುವ ಪ್ಯಾಸೆಂಜರುಗಳು ತಿಂದು ಬಿಸಾಕುವ ತಿಂಡಿ ತಿನಸುಗಳ ಪೊಟ್ಟಣ, ಗುಟ್ಕಾ ಪ್ಯಾಕೆಟ್, ಟಿಕೆಟ್ ರಾಶಿ ಅಲ್ಲಲ್ಲಿ ಬಿದ್ದುಕೊಂಡಿದೆ. ಅಂದಂದಿನ ಕಸದ ರಾಶಿಯನ್ನು ಆಯಾದ ದಿನವೇ ಗುಡಿಸಿ ಸ್ವಚ್ಛಪಡಿಸಬೇಕು. ಅದೇ ರೀತಿ ಪ್ರಯಾಣಿಕರ ತಂಗುದಾಣವನ್ನು ದಿನಲೂ ಗುಡಿಸಿ ಸ್ವಚ್ಛಗೊಳಿಸಬೇಕು. ಬಸ್ ಸ್ಟ್ಯಾಂಡಿಗೆ ತಾಗಿಕೊಂಡೇ ರಿಕ್ಷಾ ಬಾಡಿಗೆ ಮಾಡುವವರು ನಿಲ್ಲುವ ಜಾಗದಲ್ಲಿ ಕಸದ ರಾಶಿ ಇದೆ. ಅದನ್ನೂ ಕೂಡಾ ಗುಡಿಸಿ ಬಸ್ ಸ್ಟ್ಯಾಂಡ್ ಎಲ್ಲರಿಗೂ ಮಾದರಿಯಾಗುವಂತೆ ಸ್ವಚ್ಛತೆ ಕಾಪಾಡಬೇಕಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸುವರೇ

  • ಸುರೇಶ್ ಶೇರ್‍ಗಾರ್  ಬ್ರಹ್ಮಾವರ