ಹಳೆಯಂಗಡಿ ಹೆದ್ದಾರಿ ಬಳಿ ಮತ್ತೆ ತ್ಯಾಜ್ಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ದಿನಗಳ ಹಿಂದೆ ಪಂಚಾಯತಿಯಿಂದ ಸ್ವಚ್ಛತೆಗೊಂಡ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತೆ ದುಷ್ಕರ್ಮಿಗಳು ತ್ಯಾಜ್ಯ ಎಸೆಯಲಾರಂಭಿಸಿದ್ದು, ದುರ್ವಾಸನೆಯುಕ್ತ ವಾತಾವರಣ ನಿರ್ಮಾಣವಾಗಿದೆ.

ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ದಾಬಾ ಹಾಗೂ ಅಮೀನ್ ಮೂಲಸ್ಥಾನಕ್ಕೆ ಹೋಗುವ ಹೆದ್ದಾರಿ ತಿರುವು ಬಳಿ ಭಾರೀ ತ್ಯಾಜ್ಯ ಸಂಗ್ರಹವಾಗಿದ್ದನ್ನು ಪಂಚಾಯತಿ ಮೂಲಕ ತೆರವುಗೊಳಿಸಲಾಗಿತ್ತು. ಬಳಿಕ ಹೆದ್ದಾರಿ ಬಳಿ ಸೀಸಿ ಕ್ಯಾಮರಾ ಅಳವಡಿಸುವ ಬಗ್ಗೆಯೂ ಚಿಂತನೆ ನಡೆದಿತ್ತು. ಆದರೆ ಯಾವುದೂ ಫಲಪ್ರದವಾಗದೆ ಕೆಲ ದುಷ್ಕರ್ಮಿಗಳು ಮತ್ತೆ ತ್ಯಾಜ್ಯ ಎಸೆಯಲಾರಂಭಿಸಿದ್ದು, ಮತ್ತೆ ಹಳೆಯಂಗಡಿ ಸ್ವಚ್ಛತೆಗೆ ಮಸಿ ಬಳೆಯುವ ಯತ್ನ ಮಾಡುತ್ತಿದ್ದಾರೆ.