ಗಾಂಜಾ ಮಾರಾಟಗಾರ ಸೆರೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಹಳೆಯಂಗಡಿ ರೈಲ್ವೇ ಕ್ರಾಸ್ ಬಳಿ ಸೋಮವಾರ ಬೆಳಿಗ್ಗೆ ಮುಲ್ಕಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಯನ್ನು ಸುರತ್ಕಲ್ ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಶಂಶುದ್ದೀನ್ ಎಂದು ಗುರುತಿಸಲಾಗಿದೆ.      ಸೋಮವಾರ ಬೆಳಗ್ಗೆ ಮುಲ್ಕಿ ಪೆÇಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಪಕ್ಷಿಕೆರೆ ಕಡೆಯಿಂದ ಬರುತ್ತಿದ್ದ ಟಿವಿಸ್ ಪೆಗೋ ದ್ವಿಚಕ್ರ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ವಾಹನದ ಹ್ಯಾಂಡಲ್ ಹಾಗೂ ಸೀಟಿನ ಅಡಿಯ ಬಾಕ್ಸಿನಲ್ಲಿ ಸೊಪ್ಪು ಮತ್ತು ಮೊಗ್ಗುಗಳಿರುವ ಗಾಂಜಾ ತುಂಬಿದ ಸಣ್ಣ ಸಣ್ಣ ಪ್ಯಾಕೆಟುಗಳು ಸಿಕ್ಕಿದೆ. ಕೂಡಲೇ ಪೆÇಲೀಸರು ಸಂಶುದ್ದೀನ(23)ನನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.