ಏರ್ಪೋರ್ಟಲ್ಲಿ ಗಾಂಜಾ ಸಾಗಾಟಗಾರನ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಮಾನ ಪ್ರಯಾಣದ ವೇಳೆ ವಿದೇಶಕ್ಕೆ ಗಾಂಜಾ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೇರಳ ಕೋಝಿಕ್ಕೋಡ್ ನಿವಾಸಿ ಹನೀಫ್ ಬಂಧಿತ ಆರೋಪಿ. ಈತನಿಂದ 4.5 ಕೇಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹನೀಫ್ ವಿಮಾನದ ಮೂಲಕ ದೋಹಾಕ್ಕೆ ಗಾಂಜಾವನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ಮಾಡಿದಾಗ ಗಾಂಜಾ ಈತನ ಬ್ಯಾಗ್‍ನಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಎಸ್ಕೇಪ್ ಇದೇ ವೇಳೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಆರೋಪಿ ಹನೀಫ್ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ ಎಂದೂ ಹೇಳಲಾಗುತ್ತಿದೆ. ವಿಚಾರಣೆಗಾಗಿ ಕಚೇರಿಯಲ್ಲಿ ಕೂರಿಸಲಾಗಿದ್ದ ಸಂದರ್ಭ ಯಾರೊಂದಿಗೋ ಮಾತಾನಾಡಲು ಸಿಬ್ಬಂದಿ ಹೊರಹೋದಾಗ ಆರೋಪಿ ಹನೀಫ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.