ಲಾರಿ ಡಿಕ್ಕಿ ಹೊಡೆದು ಮೃತನಾದ ಯುವಕನ ಜೇಬಲ್ಲಿತ್ತು ಗಾಂಜಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೀಗ ಗಾಂಜಾದ ವಿಚಾರದಲ್ಲಿ ಭಾರೀ ಚರ್ಚೆಗಳಾಗುತ್ತಿದ್ದರೆ, ಈ ವಿಚಾರಕ್ಕೆ ಪುಷ್ಠಿ ನೀಡುವಂತೆ ಇದೀಗ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ ಯುವಕನ ಜೇಬಿನಲ್ಲಿ ಎರಡು ಪ್ಯಾಕೇಟ್ ಗಾಂಜಾ ಸಿಗುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಲಾರಿಯೊಂದು ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ತಲಪಾಡಿ ಕೆ ಸಿ ರೋಡಿನ ನಿವಾಸಿ ಸಲೀಂ (30) ಎಂಬಾತ ದಾರುಣವಾಗಿ ಸಾವನ್ನಪ್ಪಿದ್ದ. ತನ್ನ ದ್ವಿಚಕ್ರ ವಾಹನದ ಸ್ಟ್ಯಾಂಡನ್ನು ಬದಿಗೆ ಸರಿಸದೆ

ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಜೇಬಿನಲ್ಲಿ ಎರಡು ತೊಟ್ಟೆ ಗಾಂಜಾ ಲಭ್ಯವಾಗಿರುವುದು ಈತ ಗಾಂಜಾ ಸೇವಿಸಿದ್ದನೇ ಎನ್ನುವುದು ಖಚಿತವಾಗಬೇಕಾಗಿದೆ. ಘಟನೆ ಸಂಬಂಧ ಉಳ್ಳಾಲದಲ್ಲಿ ಪ್ರಕರಣ ದಾಖಲಾಗಿದೆ.