ಗಾಂಜಾ ತಂಡ ತಲವಾರು ಕಾಳಗ : ಒಬ್ಬ ಗಂಭೀರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗಾಂಜಾ ತಂಡಗಳ ಮಧ್ಯೆ ತಲವಾರು ಕಾಳಗ ನಡೆದು ಒಬ್ಬನನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೂಮಿನಾಡು ನಿವಾಸಿ ಪ್ರಜ್ವಲ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ತೂಮಿನಾಡಿನಲ್ಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತಲವಾರು ಹಿಡಿದು ತೂಮಿನಾಡಿನಲ್ಲಿ ತಿರುಗಾಡುತ್ತಿದ್ದ ಪ್ರಜ್ವಲನನ್ನು ತಂಡವೊಂದು ಹಿಗ್ಗಾಮುಗ್ಗಾ ಥಳಿಸಿ ಗಂಭೀರ ಗಾಯಗೊಳಿಸಿದೆ. ಬಳಿಕ ಊರವರು ಸೇರಿ ಪ್ರಜ್ವಲನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಮಿಸಿದ್ದಾರೆ. ಸ್ಥಳದಲ್ಲಿದ್ದ ತಲವಾರು ಹಾಗೂ ಇತರ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.