ಮಹಿಳೆ ಮೇಲೆ ಹಲ್ಲೆಗೈದು ಮಾನಭಂಗಕ್ಕೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಆರು ಜನರ ತಂಡವೊಂದು ಮಹಿಳೆಯ ಮೇಲೆ ಹಲ್ಲೆಗೈದು ಮಾನಭಂಗಕ್ಕೆ ಯತ್ನಿಸಿದ ಘಟನೆ ಬೋಳಂತೂರು ಗ್ರಾಮದಲ್ಲಿ ನಡೆದಿದೆ.

ಕಾನಕೋಡಿ ನಿವಾಸಿ ಮಹಿಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮಾರುತಿ ವ್ಯಾನಿನಲ್ಲಿ ಆಗಮಿಸಿದ ಆರು ಜನರ ತಂಡ ದುಷ್ಕøತ್ಯ ಎಸಗಿತ್ತೆನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆಕೆಯ ಮೇಲೆ ಮರದ ಸಲಾಕೆಯಿಂದ ಹಲ್ಲೆ ನಡೆಸಿದ್ದಲ್ಲದೇ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿತ್ತೆನ್ನಲಾಗಿದೆ. ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಂತೆ ದುಷ್ಕøತ್ಯ ಎಸಗಿದ ತಂಡ ಮಾರುತಿ ವ್ಯಾನಿನಲ್ಲಿ ಸ್ಥಳದಿಂದ ಪರಾರಿಯಾಗಿದೆ ಎಂದು ಗಾಯಾಳು ವಿವರಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನಂತೆ ಮಹಮ್ಮದ್ ರಫೀಕ್, ಸಿದ್ದೀಕ್, ಅಬ್ದುಲ್ ರಹಿಮಾನ್, ಪುತ್ತು, ಮೈಮುನಾ ಮತ್ತು ಸಫಿಯಾ ಎಂಬವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.