ಯುವಕರಿಬ್ಬರಿಗೆ ತಂಡ ಮಾರಣಾಂತಿಕ ಹಲ್ಲೆ

 

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಸಾರ್ವಜನಿಕ ಶನಿಪೂಜೆಗಾಗಿ ಸಿದ್ಧ್ದಪಡಿಸಿದ್ದ ಸ್ಥಳದಲ್ಲಿ ಬೈಕ್ ಸವಾರಿ ತಡೆದ ವಿಚಾರವಾಗಿ ಯುವಕರಿಬ್ಬರ ಮೇಲೆ ಭಿನ್ನ ಸಮುದಾಯದ ಎಂಟು ಜನರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕರೋಪಾಡಿ ಗ್ರಾಮದಲ್ಲಿ ನಡೆದಿದೆ
ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ರಾಜೇಶ್ ನಾಯಕ್ (38) ಮತ್ತು ರಮೇಶ್ (36) ಎಂಬಿಬ್ಬರು ತಂಡದಿಂದ ಹಲ್ಲೆಗೊಳಗಾದ ಯುವಕರು
ಮಿತ್ತನಡ್ಕದಲ್ಲಿ ಶನಿವಾರ ನಡೆಯಲಿದ್ದ ಸಾರ್ವಜನಿಕ ಶನಿಪೂಜೆಗಾಗಿ ಶುಕ್ರವಾರ ರಾತ್ರಿ ಸ್ಥಳೀಯ ಜಗಶ್ರೀ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಯುವಕರು ವ್ಯವಸ್ಥೆ ಮಾಡುತ್ತಿದ್ದರೆನ್ನಲಾಗಿದೆ  ಇದೇ ಸಂದರ್ಭ ಸ್ಥಳೀಯ ನಿವಾಸಿ ಇಬ್ರಾಹಿಂ ಖಲೀಲ್ ಎಂಬಾತ ಅತ್ತಿತ್ತ ಬೈಕ್ ಚಲಾಯಿಸುತ್ತಾ ಒಂದಿಷ್ಟು ಧಿಮಾಕಿನಿಂದ ವರ್ತಿಸಿದ್ದನೆನ್ನಲಾಗಿದೆ. ಸ್ಥಳದಲ್ಲಿದ್ದ ಯುವಕರ ಪೈಕಿ ರಾಜೇಶ್ ಎಂಬಾತ ಖಲೀಲನಲ್ಲಿ ಬೈಕ್ ಚಲಾಯಿಸುತ್ತಾ ಧೂಳೆಬ್ಬಿಸಬೇಡ ಎಂದು ಎಚ್ಚರಿಕೆ ನೀಡಿದ್ದೇ ರಾದ್ಧಾಂತಕ್ಕೆ ಕಾರಣವಾಗಿದೆ  ರಾಜೇಶನ ಎಚ್ಚರಿಕೆಯನ್ನು ಪ್ರತಿಷ್ಟೆಯನ್ನಾಗಿಸಿದ ಖಲೀಲ್ ತನ್ನ ಮಿತ್ರರಾದ ಮಿತ್ತನಡ್ಕ ನಿವಾಸಿ ಸಹೋದರರಾದ ನವಾಫ್  ಸಜಾಬ್ ಮತ್ತು ಸುಲೈಮಾನ್  ಖಲಂದರ್ ಹಾಗೂ ಇತರ ಮೂವರೊಂದಿಗೆ ಸ್ಥಳಕ್ಕಾಗಮಿಸಿ ರಾಜೇಶನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ  ಬಳಿಕ ರಾಜೇಶನ ಮೇಲೆ ಯುವಕರ ತಂಡ ರಾಡ್ ಮತ್ತು ಮರದ ದೊಣ್ಣೆಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದು, ತಡೆಯಲು ಬಂದ ರಮೇಶನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರೆನ್ನಲಾಗಿದೆ
ಗಂಭೀರವಾಗಿ ಗಾಯಗೊಂಡ ರಾಜೇಶ ಮತ್ತು ರಮೇಶನನ್ನು ತಕ್ಷಣವೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಹಲ್ಲೆ  ಕೊಲೆಯತ್ನ  ಜೀವಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು  ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ

 

ಪ್ರತಿದೂರು
ಕೊಲೆಯತ್ನ ಪ್ರಕರಣದ ಆರೋಪಿಗಳ ಪೈಕಿ ಇಬ್ರಾಹಿಂ ಖಲೀಲ್  ಸಜಾಬ್ ಮತ್ತು ನವಾಫ್ ಎಂಬವರು ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಯಾರಿನಲ್ಲಿ ನಡೆಯುತ್ತಿರುವ ಸ್ವಲಾತ್ ಕಾರ್ಯಕ್ರಮಕ್ಕೆ ಹೋಗಲು ಮಿತ್ತನಡ್ಕದಲ್ಲಿ ನಿಂತಿದ್ದಾಗ ರಾಜೇಶ್  ಪ್ರಶಾಂತ್ ಪ್ರಸಾದ್  ಉಮೇಶ್ ಗೌಡ  ಸುರೇಶ್  ವಿನಾಯಕ ಮತ್ತು ಶರತ್ ಎಂಬವರು ಹಲ್ಲೆ ನಡೆಸಿದ್ದಾರೆಂದು ಪ್ರತಿದೂರು ನೀಡಿದ್ದಾರೆ.