ಕೋಟೆಕಾರಿನ ಗಣೇಶೋತ್ಸವ

ಬಾಲ ಗಂಗಾಧರ ತಿಲಕರು ರಾಷ್ಟ್ರದ ಜನರನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವವು ಮಂಗಳೂರಿನ ಕೋಟೆಕಾರು ಎಂಬ ಊರಲ್ಲಿ ಜನರನ್ನು ಒಗ್ಗೂಡಿಸುವ ಬದಲು ವಿಘಟಿಸಲು ಕಾರಣವಾಗಿದೆ ಸುಮಾರು 40 ವರ್ಷಗಳಿಗೂ ಹಿಂದೆ ಆರಂಭಗೊಂಡ ಇಲ್ಲಿನ ಗಣೇಶೋತ್ಸವವನ್ನು ನಡೆಸುವವರ ನಡುವೆ ತಿಕ್ಕಾಟ ಬಂದು ಇದೀಗ ಒಂದೇ ಊರಲ್ಲಿ ಮೂರು ಕಡೆ ಗಣಪತಿ ಪೂಜೆ ನಡೆಯುತ್ತದೆ ಉತ್ಸವದ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮತ್ತೊಂದು ಸಮಿತಿಯವರನ್ನು ಬೈದಾಡುವುದೂ ಇದೆ ಮೊದಲು ಗಣೇಶೋತ್ಸವ ಶಾಲೆಯಲ್ಲಿ ನಡೆಯುತ್ತಿತ್ತು ತಿಕ್ಕಾಟ ಬಂದಾಗ ಒಂದು ಗುಂಪು ಮಠಕ್ಕೆ ಹೋಯಿತು ಅಲ್ಲೂ ತಿಕ್ಕಾಟವಾಗಿ ಮೂರನೇ ಗುಂಪು ಬೀದಿಗೆ ಬಂತು ಬೀರಿಯ ಗಣೇಶೋತ್ಸವ ಸಮಿತಿಯಲ್ಲಿ ಈ ವರ್ಷ ಮತ್ತೆ ತಿಕ್ಕಾಟ ನಡೆದು ಒಂದು ಗುಂಪು ಉತ್ಸವದಿಂದ ದೂರ ನಿಂತಿತು 4ನೇ ಗುಂಪು ಉತ್ಸವ ನಡೆಸಲು ಬಹುಷ ಸ್ಥಳ ಇಲ್ಲವಾಯಿತೋ ಏನೋ ಊರಿನವರ ಸಂಕಷ್ಟ ಏನೆಂದರೆ ಪ್ರತಿ ವರ್ಷ ಧನ ಸಹಾಯ ಕೇಳಲು ಬರುವ ಮೂರು ತಂಡಗಳಿಗೆ ಹಣ ನೀಡಬೇಕಾಗಿರುವುದು ಇದು ಸ್ಥಳೀಯ ಜನರಿಗೊಂದು ಹೊರೆ ಮೂರು ಕಡೆ ಪೂಜೆ ಮಾಡಿಸುವ ಕಾಣಿಕೆ ನೀಡುವ ವೆಚ್ಚ ಬೇರೆ ಇಷ್ಟೆಲ್ಲಾ ಆದ ಬಳಿಕವೂ ಸಮಿತಿಗಳ ಹಣಕಾಸು ವ್ಯವಹಾರಗಳ ಬಗ್ಗೆ ಜನರಲ್ಲಿ ಹಲವು ಸಂಶಯಗಳಿವೆ ರಶೀದಿ ಪುಸ್ತಕಗಳು ಮಾಯವಾಗಿರುವುದು ಬಿಲ್ಲುಗಳಲ್ಲಿ ಅಧಿಕ ಮೊತ್ತ ನಮೂದಾಗಿರುವುದು ಲೆಕ್ಕಾಚಾರ ಅಪೂರ್ವವಾಗಿರುವುದು ಇತ್ಯಾದಿಗಳ ಬಗ್ಗೆ ಗುಸು ಗುಸು ಮಾತು ನಡೆಯುತ್ತಿದೆ ಈ ಊರಿನಲ್ಲಿ ಹಲವು ದೇವಸ್ಥಾನಗಳು ಭೂತಸ್ಥಾನಗಳು ಅಲ್ಲೆಲ್ಲ ಜಾತ್ರೆಗಳು ಮಾತ್ರವಲ್ಲ ಕೃಷ್ಣ ಜಯಂತಿ ಶಾರದೋತ್ಸವ ಇತರ ಜಯಂತಿ ಕಾರ್ಯಕ್ರಮಗಳೆಲ್ಲಾ ಸೇರಿ ಜನರು ದೇವರ ಹೆಸರಲ್ಲಿ ನೀಡಬೇಕಾದ ಮೊತ್ತ ಗಣನೀಯ ಪ್ರಮಾಣದಲ್ಲಿರುತ್ತದೆ ಅಂತಾದ್ದರಲ್ಲಿ ಒಂದೇ ಊರಲ್ಲಿ ಮೂರು ಗಣೇಶೋತ್ಸವ ನಡೆಯುವುದು ಸರಿಯೇ ಹಿಂದೂಗಳಲ್ಲೇ ಒಗ್ಗಟ್ಟಿಲ್ಲ ಎಲ್ಲರಿಗೂ ದೇವರ ಹೆಸರಲ್ಲಿ ಅವರವರ ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ ಎಂಬಂತೆ ಇದು ತೋರುತ್ತದೆ
ಹಿಂದೂಗಳಲ್ಲಿ ಏಕತೆ ಮೂಡಿಸಲು ಪ್ರಯತ್ನಿಸುವ ಹಿಂದೂ ನಾಯಕರು ಕೋಟೆಕಾರಿನಲ್ಲಿ ಒಂದೇ ಸಮಿತಿ ಮೂಲಕ ಒಂದೇ ಗಣೇಶೋತ್ಸವವು ನಡೆಯುವಂತೆ ಅಗತ್ಯ ಹೆಜ್ಜೆಗಳನ್ನು ಇಡುವರೆಂದು ನಿರೀಕ್ಷಿಸಬಹುದೇ

  • ಎಂ ಕೆ  ಮಂಗಳೂರು