ಗಣೇಶ್ ಮೆಡಿಕಲ್ಸ್ ಆ್ಯಂಡ್ ಸೂರ್ಯ ಲೈಫ್ಕೇರ್ ಆರಂಭ

ಮಂಗಳೂರು : ಗ್ರಾಹಕರಿಗೆ ಸಕಲ ಔಷಧಗಳೊಂದಿಗೆ ದಕ್ಷ ಮತ್ತು ಅನುಭವಿ ಸಿಬ್ಬಂದಿ ಸೇವೆ ನೀಡಲು ಹೆಸರಾಂತ ಔಷಧ ಸಂಸ್ಥೆ ಗಣೇಶ್ ಮೆಡಿಕಲ್ಸಿನ ನೂತನ ಮಳಿಗೆ `ಗಣೇಶ್ ಮೆಡಿಕಲ್ಸ್ ಆ್ಯಂಡ್ ಸೂರ್ಯ ಲೈಫ್ಕೇರ್’ ನಗರದ ಪಂಪ್ವೆಲ್ ಮಹಾವೀರ ವೃತ್ತ ಬಳಿ ಇರುವ ಕ್ಲಾಸಿಕ್ ಗೇಟ್ ವೇ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಗುರುದೇವಾನಂದ ಸ್ವಾಮಿ, ಅಹಮದ್ ಮೌಲವಿ ಖಾಝಿ, ಧರ್ಮಗುರು ಜೆ ಬಿ ಕ್ರಾಸ್ತಾ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆ ಸಿ ನಾೈಕ್, ತಾರಾಕ್ಷಿ ನಾರಾಯಣ್, ಕೃಷ್ಣ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.

ಉತ್ತಮ ಗುಣಮಟ್ಟದ ಅಂತಾರಾಷ್ಟ್ರೀಯ ಮಾದರಿಯ ಔಷಧ ಮಳಿಗೆ ಅಗತ್ಯ ಎನ್ನುವ ನಿಟ್ಟಿನಲ್ಲಿ ಪಂಪ್ವೆಲ್ಲಿನಲ್ಲಿ ವಿಶಾಲ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ನೂತನ ಮಳಿಗೆ ವಿಶಾಲ ಹಾಗೂ ಹವಾನಿಯಂತ್ರಿತವಾಗಿದ್ದು, ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನೂ ಒಳಗೊಂಡಿದೆ. ಗಣೇಶ್ ಮೆಡಿಕಲ್ಸ್ ದ ಕ ಜಿಲ್ಲೆ ಸೇರಿದಂತೆ ನೆರಯ ಜಿಲ್ಲೆಗಳಾದ ಕಾಸರಗೋಡು, ಕಣ್ಣೂರು, ಕೋಝಿಕೋಡ್ ಜಿಲ್ಲೆಗಳಲ್ಲಿ ಮನೆ ಮಾತಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆ ಆಡಳಿತ ನಿರ್ದೇಶಕ ಸದಾನಂದ ಶೆಟ್ಟಿ, ನಮಿತಾ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.