ಜೂಜಾಟ ತಂಡ ಸೆರೆ : 34,450 ರೂ ವಶ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಹಣ ಇಟ್ಟು ಜೂಜಾಟವಾಡುತಿದ್ದ ಎಂಟು ಮಂದಿಯ ತಂಡವನ್ನು ಪೆÇಲೀಸರು ಸೆರೆ ಹಿಡಿದಿದ್ದಾರೆ.

ಇವರಿಂದ ಆಟಕ್ಕೆ ಬಳಸಲಾಗಿದ್ದ 34,450 ರೂ ಹಣ, ಮೂರು ಮೊಬೈಲ್ ಪೆÇೀನ್, ಸಂಚರಿಸಿದ ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರ್ ಡಿ ನಗರ ಕೂಡ್ಲು ನಿವಾಸಿಗಳಾದ ಪ್ರಜ್ವಲ್ (24), ಸುನಿಲ್ ನಾಯ್ಕ್ (34), ಪ್ರೇಂಜಿತ್ (28), ಕುಂಬಳೆ ಕೋಯಿಪ್ಪಾಡಿ ನಿವಾಸಿ ಜಗನ್ನಾಥ್ (51), ಬೆಂಗರ ಕುನ್ನು ನಿವಾಸಿ ಟಿ ನಿತ್ಯಾನಂದ (36), ಪಿ ಸಜೀವ್ (35), ಕೆ ದಿನೇಶ್ (35) ಕೆ ಮೋಹನ (44) ಎಂಬಿವರು ಸೆರೆಗೀಡಾದ ಜೂಜಾಟಗಾರರಾಗಿದ್ದಾರೆ.

ಪೆÇಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಈ ಕಾರ್ಯಾಚರಣೆ ನಡೆದಿದೆ. ಕೂಡ್ಲು ಪೇರ್ನಡ್ಕ ಚಾಮುಂಡಿ ಸಮೀಪ ಸಾರ್ವಜನಿಕ ಸ್ಥಳದಿಂದ ಇವರನ್ನು ಸೆರೆ ಹಿಡಿಯಲಾಗಿದೆ.