ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ : ನಗದು ಸಹಿತ 8 ಜನರ ಬಂಧನ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಕಾರ್ಕಳ : 8 ಜನರ ತಂಡವೊಂದು ಹೆಬ್ರಿಯ ಸುಭಾಸ್ ಬಾರಿನ ಹಿಂದಿನ ಹಾಡಿಯಲ್ಲಿ ಅಕ್ರಮವಾಗಿ ಉಲಾಯಿ ಪಿದಾಯಿ ಇಸ್ಪೀಟು ಆಟವಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿ, ಅವರಿಂದ 1270 ರೂ ನಗದು ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ ಹಣವನ್ನು ಪಣಕ್ಕಿಟ್ಟು ಆಡುತ್ತಿದ್ದ ಸುನಿಲ್ (36), ಸುರೇಶ್ (33), ಅಣ್ಣಿ (35), ವಿಜಯ (44), ಮಂಜುನಾಥ್ ಶೆಟ್ಟಿ (55), ಕೃಷ್ಣ (46), ಅರುಣ್ (35) ಹಾಗೂ ಭೋಜ ಪೂಜಾರಿ (51) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.