ವಿದ್ಯಾರ್ಥಿನಿ ಅತ್ಯಾಚಾರಗೈದು ಬೆಂಕಿ ಹಚ್ಚಿದ ಸ್ನೇಹಿತ ಪರಾರಿ

ಸಾಂದರ್ಭಿಕ ಚಿತ್ರ

ಖಗರಿಯಾ(ಬಿಹಾರ) : ಬಿಹಾರ ಖಗರಿಯಾ ಜಿಲ್ಲೆಯ ಮನೆಯೊಂದರಲ್ಲಿ ಕಾಲೇಜು ಯುವತಿಯ ಮೇಲೆ ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರ ನಡೆಸಿ, ಬೆಂಕಿ ಹಚ್ಚಿದ ಭೀಕರ ಘಟನೆಯೊಂದು ನಡೆದಿದೆ. ತೆಮ್ತಾ ಕರಾರಿ ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿಯ ಮನೆಗೆ ಪ್ರವೇಶಿಸಿದ ಯುವಕ ಅತ್ಯಾಚಾರಗೈದ ಬಳಿಕ ಆಕೆಯ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕೃತ್ಯ ನಡೆಸಿದ ನಂತರ ಆತ, ಆಕೆಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿ ಹೊರಗಡೆಯಿಂದ ಲಾಕ್ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.