ಪಕ್ಷಿಕೆರೆ ಕೋಳಿ ಅಂಕದಲ್ಲಿ ಹೊೈಕೈ ?

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ಭಾನುವಾರ ನಡೆದ ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ಭಾರೀ ಜಟಾಪಟಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಭಾನುವಾರ ಪಕ್ಷಿಕೆರೆಯಲ್ಲಿ ಭರ್ಜರಿ ಕೋಳಿ ಅಂಕ ನಡೆದಿದ್ದು, ಲಕ್ಷಾಂತರ ರೂ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ. ಈ ನಡುವೆ ಕೋಳಿ ಅಂಕದಲ್ಲಿ ಬೆಟ್ಟಿಂಗ್ ಹಾಕಿದವನೇ ಪರಾರಿಯಾದ ಘಟನೆ ಒಂದೆಡೆಯಾದರೆ ಇನ್ನೊಂದೆಡೆ ಕೋಳಿಗಳ ಕಾದಾಟದಲ್ಲಿ ಸೋತ ಕೋಳಿ ಬಗ್ಗೆ ಎರಡು ತಂಡಗಳ ನಡುವೆ ಹೊೈಕೈ ನಡೆದಿದೆ ಎನ್ನಲಾಗಿದೆ.

ಕೋಳಿ ಅಂಕ ನಡೆಯುವ ಸ್ಥಳದಲ್ಲಿ ಎರಡು ತಂಡಗಳ ಮಧ್ಯೆ ಗಲಾಟೆ ಆಗುತ್ತಿದ್ದರೂ ಜಗಳ ನಿಲ್ಲಿಸಲು ಯಾರೂ ಹೋಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪರವಾನಿಗೆ ನೀಡದಿರಲು ಆಗ್ರಹ

ರಾಜ್ಯದಲ್ಲಿ ಜನಪದ ಕ್ರೀಡೆ ಕಂಬಳದ ಬಗ್ಗೆ ನ್ಯಾಯಾಲಯ ಪ್ರಾಣಿ ಹಿಂಸೆ ಎಂದು ತೀರ್ಪು ನೀಡಿರುವಾಗ ಕೋಳಿ ಅಂಕ ಕೂಡ ಹಿಂಸೆಯಾಗಿರುವುದರಿಂದ ಕೋಳಿ ಅಂಕವನ್ನು ಸಂಪೂರ್ಣ ನಿಷೇಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೋಳಿ ಅಂಕದಲ್ಲಿ ಲಕ್ಷಾಂತರ ರೂ ಬೆಟ್ಟಿಂಗ್ ನಡೆಯುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.