ಸಿಂಡಿಕೇಟ್ ಬ್ಯಾಂಕ್ ಹಂಪನಕಟ್ಟಾ ಶಾಖೆಯ ಸ್ಥಾಪಕ ದಿನಾಚರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಿಂಡಿಕೇಟ್ ಬ್ಯಾಂಕ್ ಹಂಪನಕಟ್ಟೆ ಶಾಖೆ ಸ್ಥಾಪಕ ದಿನಾಚರಣೆಯನ್ನು ಅಕ್ಟೋಬರ್ 9ರಂದು ಶಾಖಾ ಪ್ರಾಂಗಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆಎಂಸಿಯ ಡೀನ್ ವೆಂಕಟ್ರಾಯ ಪ್ರಭು ಹಾಗೂ ಬ್ಯಾಂಕಿನ ಮಣಿಪಾಲದ ವಲಯ ಕಚೇರಿಯ ಮಹಾಪ್ರಬಂಧಕ ಸತೀಶ್ ಕಾಮತ್ ಆಗಮಿಸಿದ್ದರು.

ಬ್ಯಾಂಕಿನ ಸಹಾಯಕ ಪ್ರಬಂಧಕ ನಿಖಿಲ್ ಕುಮಾರ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಖೆಯ ಹಿರಿಯ ಪ್ರಬಂಧಕರು ಕುಮಾರಿ ಅಬ್ಬಾ ಪೂನಮ್ ತಿರ್ಕೆಯವರು ಅತಿಥಿಗಳ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಕೆಎಂಸಿಯ ಕಾರ್ಡಿಯಾಲಜಿ ವಿಭಾಗದ ಆಡಿಷನಲ್ ಪ್ರೊಫೆಸರ್ ಡಾ ಪದ್ಮನಾಭ ಕಾಮತÀರಿಗೆ ಶಾಲು ಹೊದಿಸಿ ಫಲಪುಷ್ಪದೊಂದಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ಉಪಮಹಾಪ್ರಬಂಧಕರಾದ ಸೀತಾರಾಮ ಸೋಮಯಾಜಿ ಉಪಸ್ಥಿತರಿದ್ದರು.