ಜಲನಿಧಿ ಯೋಜನೆಗೆ ಶಿಲಾನ್ಯಾಸ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತ್ ಜಲನಿಧಿ ಯೋಜನೆಯ ಅಂಗವಾದ ಬಾಳಿಯೂರು ಶುದ್ಧಜಲ ವಿತರಣಾ ಸಮಿತಿಯ ಟ್ಯಾಂಕ್ ನಿರ್ಮಾಣ ಯೋಜನೆಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ನಂದಗೋಪಾಲ ಶಿಲಾನ್ಯಾಸಗೈದು ಚಾಲನೆ ನೀಡಿದರು.

ಈ ಸಲ ಮಳೆ ಕಮ್ಮಿಯಾಗಿ ಬರಗಾಲವೆಂದು ಪರಿಗಣಿಸಲ್ಪಟ್ಟ ಕೇರಳ ರಾಜ್ಯದ ಗಡಿ ಪ್ರದೇಶದಲ್ಲಿ ಈಗಲೇ ನೀರಿನ ಸಮಸ್ಯೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಪಂಚಾಯತಿಗಳಲ್ಲೂ ಜಲ ನಿಧಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಮೀಂಜ ಗ್ರಾ ಪಂ ವ್ಯಾಪ್ತಿಯಲ್ಲೂ ಶುದ್ಧಜಲ ವಿತರಣಾ ಟ್ಯಾಂಕ್ ನಿರ್ಮಾಣ ಯೋಜನೆಗೆ ರೂಪು ನೀಡಲಾಗಿದೆ.