ಮಾಜಿ ಉಪ ಮೇಯರ್ ವಿಧಿವಶ

judith mascarenhas

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್, ಸಾಮಾಜಿಕ ಕಾರ್ಯಕರ್ತೆ, ಗಾಂಧಿ ವಿಚಾರವಾದಿ ಜುಡಿತ್ ಮಸ್ಕರೇನ್ಹಸ್ (85) ಸೋಮವಾರದಂದು ಜೆಪ್ಪುವಿನಲ್ಲಿರುವ ತಮ್ಮ ಪ್ರಶಾಂತ್ ನಿವಾಸದಲ್ಲಿ ವಿಧಿವಶರಾದರು.

ಅವರು ಹಲವು ಸಮಯಗಳಿಂದ ಅಸೌಖ್ಯದಲ್ಲಿದ್ದರು. ಮಂಗಳೂರು ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಜುಡಿತ್, ಮೂರು ಅವಧಿಗೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ ಎರಡು ಬಾರಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ್ದರು.

ಬಡವರ, ದೀನದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಮಂಗಳೂರಿನ ಮದರ್ ತೆರೆಸಾ ಎಂದೇ ಗುರುತಿಸಿಕೊಂಡಿದ್ದರು. ಶಿಕ್ಷಕಿಯಾಗಿ, ರಾಜಕಾರಣಿಯಾಗಿ, ಸಮಾಲೋಚಕಿಯಾಗಿ, ಪತ್ರಕರ್ತೆಯಾಗಿ ಕೆಲಸ ಮಾಡಿದ್ದರು. ತಾನು ಉಪಮೇಯರ್ ಆಗಿದ್ದ ಅವಧಿಯಲ್ಲಿ ನಿರ್ಗತಿಕರಿಗೆ ಅಭಯ ಆಶ್ರಮ, ಪ್ರಶಾಂತ್ ನಿವಾಸ್, ಮದರ್ ತೆರೆಸಾ ಹೋಮ್, ಸಿಯಾನ್ ಆಶ್ರಮ, ಸೈಂಟ್ ಆ್ಯಂಟನಿ ಹೋಮ್ ಇತ್ಯಾದಿ ಕಡೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು.