ಅರಣ್ಯ ಸಿಬ್ಬಂದಿಗೆ ಬೆದರಿಕೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಬಚಗಾಂವ ಸ ನಂ 81ರಲ್ಲಿ ಅರಣ್ಯ ಜಾಗ ಅತಿಕ್ರಮಿಸಿ ಹೊಸ ಮನೆ ಕಟ್ಟಲು ಮುಂದಾಗಿರುವುದನ್ನು ತಡೆಯಲು ಹೋದ ಅರಣ್ಯ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಪಡಿಸಿ ಜೀವ ಬೆದರಿಕೆ ಹಾಕಲಾಗಿದೆಯೆಂದು ಉಪರೇಂಜರ್ ರವೀಂದ್ರ ಕರ್ನಲ್ ಅವರು ಗುರುವಾರ ರಾತ್ರಿ ದೂರು ನೀಡಿದ್ದಾರೆ.

ಬಚಗಾಂವದಲ್ಲಿ ಅರಣ್ಯ ಜಾಗದಲ್ಲಿ ಅಕ್ರಮ ಮನೆ ಕಟ್ಟುವುದು ಗೊತ್ತಾಗಿ ಪ್ರಶ್ನಿಸಲು ಹೋದ ಉಪರೇಂಜರ್ ರವೀಂದ್ರ ಅವರ ಕರ್ತವ್ಯಕ್ಕೆ ಅಬ್ದುಲ್, ಇಬ್ರಾಹಿಂ, ಖಾದರ್, ಯೂಸೂಫ್, ದಾಮೋದರ ಅವರು ಅಡ್ಡಪಡಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.