ಅರಣ್ಯರಕ್ಷಕ ಎಸಿಬಿ ಬಲೆಗೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ತಾಲೂಕಿನ ಬಿಸಲಕೊಪ್ಪ ಸಮೀಪದ ಶಿವಳ್ಳಿ ಬೀಟ್ ಅರಣ್ಯರಕ್ಷಕ ಬಡ ರೈತನಿಂದ 5,000 ರೂ ಲಂಚ ಸ್ವೀಕರಿಸುವಾಗ ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದವರು ದಾಳಿ ನಡೆಸಿ, ಅರಣ್ಯರಕ್ಷಕನನ್ನು ಹಣ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಳ್ಳಿ ಬೀಟನ ಅರಣ್ಯರಕ್ಷಕ ಗುರುಶಾಂತ ತೆಂಕಣ್ಣನವರ್ ಎಸಿಬಿ ಬಲೆಗೆ ಸಿಕ್ಕಿಬಿದ್ದ ವ್ಯಕ್ತಿ. ಕೂರ್ಸೆ ಗ್ರಾಮದಲ್ಲಿ ಕೃಷ್ಣ ಮರಾಠೆ ಎಂಬುವವರು ಜಮೀನಿನ ಅರಣ್ಯ ಅತಿಕ್ರಮಣ ಜಾಗದಲ್ಲಿ ಬಾವಿ ತೆಗೆದಿದ್ದು, ಇದಕ್ಕೆ ಆಕ್ಷೇಪ ಮಾಡಿದ ಅರಣ್ಯರಕ್ಷಕ ಗುರುಶಾಂತ 10,000 ರೂ ನೀಡಲು ಸೂಚಿಸಿದ್ದನು. ಬಳಿಕ ಬಡವರಾದ ಕೃಷ್ಣ ಮರಾಠೆ ಅವರು, ಅಷ್ಟು ಹಣ ಕೊಡಲು ಆಗುವುದಿಲ್ಲ ಎಂದು ತಿಳಿಸಿ ರಿಯಾಯಿತಿ ತೋರಲು ಮನವಿ ಮಾಡಿದ್ದರು. ಇದಾದಂತರ ಅರಣ್ಯರಕ್ಷಕ ಗುರುಶಾಂತನು ಕೃಷ್ಣ ಮರಾಠೆಗೆ ಮನೆಗೆ ಬರಲು ಸೂಚಿಸಿದ್ದು, ಮನೆಗೆ ಹೋದ ಕೃಷ್ಣ ಅವರಿಗೆ 5,000 ರೂ ಕೊಡಲೇಬೇಕೆಂದು ತಿಳಿಸಿದ್ದು, ಇದಾದ ಬಳಿಕ ಕೃಷ್ಣ ಮರಾಠೆ ಅವರು ಕಾರವಾರಕ್ಕೆ ತೆರಳಿ ಗುರುಶಾಂತನÀ ಕಿರಿಕಿರಿ ವಿರುದ್ಧ ದೂರು ನೀಡಿದ್ದರು. ಅವರ ನಿರ್ದೇಶನದಂತೆ ಮಂಗಳವಾರ 5,000 ರೂ ಹಿಡಿದುಕೊಂಡು ಎಕ್ಕಂಬಿ ಬಳಿ ಇರುವ ಅರಣ್ಯರಕ್ಷಕ ಗುರುಶಾಂತನ ಮನೆಗೆ ಕೃಷ್ಣ ಮರಾಠಿ ಹೋಗಿದ್ದು, ಅದೇ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ ನೇತೃತ್ಬದಲ್ಲಿ ಸಿಬ್ಬಂದಿಗಳಾದ ರಮೇಶ ಮತ್ತಿತರರು ದಾಳಿ ನಡೆಸಿ ಅರಣ್ಯರಕ್ಷಕನನ್ನು ರೈಟ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.