ಅರಣ್ಯದಲ್ಲಿ ಬೆಂಕಿ ಅನಾಹುತ

ನಮ್ಮ ಪ್ರತಿನಿಧಿ ವರದಿ

ಶಿರಸಿ : ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಂಡಗೆಸರ ಗ್ರಾಮದ ಅಬ್ರಿಮನೆ ಅರಣ್ಯ ಪ್ರದೇಶದಲ್ಲಿ ಸೋಮವಾರ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ 50 ಎಕರೆಗಿಂತ ಅಧಿಕ ಪ್ರದೇಶದಲ್ಲಿದ್ದ ಮರ-ಗಿಡಗಳು ಹೊತ್ತು ಉರಿದ ಘಟನೆ ಸೋಮವಾರ ನಡೆದಿದೆ.

ಆಕಸ್ಮಿಕ ಎನ್ನಲಾದ ಬೆಂಕಿ ಅವಘಡದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರಗಳು ಸುಟ್ಟು ಭಸ್ಮವಾಗಿವೆ. ಹತ್ತಿರದ ಖಾಸಗಿಯವರ ಜಾಗಕ್ಕೂ ಬೆಂಕಿ ಆವರಿಸಿ ಸಿಕ್ಕಿದ್ದನ್ನೆಲ್ಲ ಆಪೋಶನ ತೆಗೆದುಕೊಂಡಿದೆ. ಅಬ್ರಿಮನೆಯ ಮಂಜುನಾಥ ಹೆಗಡೆ ಅವರ ಮನೆ ಸುತ್ತ ಆವರಿಸಿದ ಬೆಂಕಿಯಿಂದ ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕದಳದ ವಾಹನ ಆಗಮಿಸದ ಪರಿಣಾಮ ಸ್ಥಳೀಯರು ಬೆಂಕಿ ಆರಿಸಲು ಹರಸಾಹಸಪಟ್ಟರು.