ಅರಣ್ಯ ಇಲಾಖೆಯಿಂದ ಇಂಗು ಗುಂಡಿ ಕೆಲಸ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಅರಣ್ಯದಲ್ಲಿ ಇಂಗು ಗುಂಡಿಗಳನ್ನು ತೋಡುವ ಮೂಲಕ ತಾಲುಕಿನ ಅರಣ್ಯ ಇಲಾಖೆಯಿಂದ ಉತ್ತಮ ಕೆಲಸ ನಡೆದಿದೆ. ಜೋಯಿಡಾ, ಪಣಸೋಲಿ, ಕುಂಬಾರವಾಡಾ ಹೀಗೆ ಹಲವಾರು ಕಡೆಗಳಲ್ಲಿ ಮಳೆಗಾಲದಲ್ಲಿ ಬಿದ್ದ ನೀರು ಹರಿದು ಹೋಗದೇ ಈ ಇಂಗು ಗುಂಡಿಗಳಲ್ಲಿ ಸಂಗ್ರಹವಾಗಿ ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿ ಎನ್ನುವ ಉತ್ತಮ ಉದ್ದೇಶ ಅರಣ್ಯ ಇಲಾಖೆಯದ್ದಾಗಿದೆ.

ಇದು ಪ್ರತಿಯೊಬ್ಬರು ಮಾಡಲೇ ಬೇಕಾದ ಕೆಲಸವಾಗಿದೆ. ಇಂಗು ಗುಂಡಿ ತೋಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ ಭವಿಷ್ಯತ್ತಿನಲ್ಲಿ ನಮಗೆ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ, ಪ್ರಾಣಿಗಳಿಗೂ ಕುಡಿಯಲು ನೀರು ದೊರೆಯುತ್ತದೆ, ಅಲ್ಲದೇ ಎಷ್ಟೋ ಮರಗಳ ಬೇರುಗಳಿಗೆ ನೀರು ಸಿಗುತ್ತದೆ. ಪರಿಸರದ ರಕ್ಷಣೆ ಇದರಿಂದ ಸಾಧ್ಯವಾಗಿದೆ.

ಜೋಯಿಡಾದ ತಾಲೂಕಿನ ಅರಣ್ಯ ಇಲಾಖೆಯವರು ಇಂಗು ಗುಂಡಿಗಳನ್ನು ತೊಡುವುದರಿಂದ ಕಾಡು ಇನ್ನೂ ಅಭಿವೃದ್ಧಿಯಾಗಲಿ ಎನ್ನುವುದು ಎಲ್ಲರ ಮಾತು.