ಯೋಗ, ಸಂಸ್ಕøತ ಕಲಿಯಲು ಗೋಕರ್ಣಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಉತ್ತರ ಕನ್ನಡದ ಖ್ಯಾತ ಪ್ರವಾಸಿ ಸ್ಥಳ ಹಾಗೂ ತೀರ್ಥಕ್ಷೇತ್ರ ಗೋಕರ್ಣಕ್ಕೆ ಹರಿದು ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಪುಟ್ಟ ಪಟ್ಟಣ ಯೋಗ ಮತ್ತು ಹಿಂದೂ ವೈದಿಕ ಪದ್ಧತಿಗಳನ್ನು ಕಲಿಯುವ ತಾಣವಾಗಿ ಬಿಟ್ಟಿದೆ. ಗೋಕರ್ಣ ದೇವಾಲಯದಲ್ಲಿ ಶಿವನ ಆತ್ಮಲಿಂಗವಿರುವುದರಿಂದ ಅದು ಸಾಕಷ್ಟು ಖ್ಯಾತವಾಗಿದೆ.

ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಗೋಕರ್ಣದ ಬೀಚಿನಲ್ಲಿ ಕನಿಷ್ಠ 200 ವಿದೇಶಿಯರು ಕಾಣಸಿಗುತ್ತಾರೆ. ಸುಮಾರು ಒಂದು ದಶಕದಿಂದೀಚೆಗೆ ವಿದೇಶಿಯರು ಗೋವಾದ ಜನಜಂಗುಳಿಯ ಬೀಚುಗಳ ಬದಲಿಗೆ ಗೋಕರ್ಣದ ಬೀಚುಗಳಿಗೆ ಬರಲಾರಂಭಿಸಿದ್ದರು. ಇದೀಗ ಹೆಚ್ಚು ಹೆಚ್ಚು ವಿದೇಶೀಯರು ಗೋಕರ್ಣಕ್ಕೆ ಬಂದು ಯೋಗ ಮತ್ತು ಸಂಸ್ಕøತ ಕಲಿಯಲು ಆರಂಭಿಸಿದ್ದು ಒಂದು ಉತ್ತಮ ಬೆಳವಣಿಗೆ.

“ನಾನು ಕಳೆದ ಏಳು ವರ್ಷಗಳಿಂದ ಪ್ರತಿ ಅಕ್ಟೋಬರ್ ತಿಂಗಳಲ್ಲಿ ಯೋಗ ಕಲಿಯಲು ಭಾರತಕ್ಕೆ ಬರುತ್ತಿದ್ದೇನೆ.  ಕಳೆದ ನಾಲ್ಕು ವರ್ಷಗಳಿಂದ ಗೋಕರ್ಣಕ್ಕೆ ಬಂದು ಸಂಸ್ಕøತ ಕಲಿಯುತ್ತಿದ್ದೇನೆ” ಎಂದು ಸ್ವೀಡನ್ನಿನ ಯೋಗ ಅಧ್ಯಾಪಕ ಅಲ್ಬಿನ್ ಪ್ರೆಬಿಸ್ಚ್ ಹೇಳುತ್ತಾರೆ. “ಸಂಸ್ಕøತ ಕಲಿಯಲು ನಾನು ಹರಿದ್ವಾರಕ್ಕೆ ಹೋಗಬೇಕೆಂದಿದ್ದರೂ ನನ್ನ ಸ್ನೇಹಿತರೊಬ್ಬರು ಗೋಕರ್ಣಕ್ಕೆ ಹೋಗುವಂತೆ ತಿಳಿಸಿದರು” ಎಂದು ಅವರು ವಿವರಿಸುತ್ತಾರೆ.

ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ತತ್ವಶಾಸ್ತ್ರದ ಉಪನ್ಯಾಸಕಿಯಾಗಿರುವ ಪೆಟ್ರೀಶಿಯಾ ಪಿಯಂಟ್ಕ ಎಂಬವರು ಪ್ರತಿ  ಸೆಪ್ಟೆಂಬರ್ ತಿಂಗಳಲ್ಲಿ ಯೋಗ ಕಲಿಸಲು ಹಾಗೂ ಸಂಸ್ಕøತ ಕಲಿಯಲು ಗೋಕರ್ಣಕ್ಕೆ ಬರುತ್ತಾರೆ ಹಾಗೂ ಮಾರ್ಚ್ ತನಕ ಇಲ್ಲಿಯೇ ನೆಲೆಸುತ್ತಾರೆ. ಇಲ್ಲಿನ ಹೋಮ, ಹವನ, ಯಜ್ಞಾದಿಗಳಿಂದ ಅವರು ತೀವ್ರ ಪ್ರಭಾವಿತರಾಗಿದ್ದಾರೆ.

ಗೋಕರ್ಣಕ್ಕೆ ಬಂದು ಇಲ್ಲಿನ ಪದ್ಧತಿಗಳಿಂದ ಪ್ರೇರಿತರಾಗುವ ಹೆಚ್ಚಿನವರು ರಷ್ಯಾ ಮೂಲದವರಾಗಿದ್ದು, ಕೃಷ್ಣನ ಭಕ್ತರಾಗಿದ್ದಾರೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಗನುಗುಣವಾಗಿ ಇಲ್ಲಿ ಹಲವಾರು ಹೋಟೆಲುಗಳು, ಯೋಗ ಹಾಗೂ ಸಂಸ್ಕøತ ಕೇಂದ್ರಗಳು ಹಾಗೂ ಹೋಂಸ್ಟೇಗಳು ತಲೆಯೆತ್ತಿವೆ.