ದೇವರ ಸ್ವಂತ ನಾಡಿನ ವಿದೇಶಿ ಪ್ರವಾಸಿಗರಲ್ಲಿ ಊಟಕ್ಕೂ ದುಡ್ಡಿಲ್ಲ

ನೋಟು ಅಮಾನ್ಯ ಎಪೆಕ್ಟ್

 ತಿರುವನಂತಪುರಂ :  ದೇವರ ಸ್ವಂತ ನಾಡೆಂದು ಪ್ರಸಿದ್ಧಿ ಪಡೆದಿರುವ ಕೇರಳ ಪ್ರಕೃತಿ ಸೊಬಗನ್ನು ಸವಿಯಲು ವರ್ಷದುದ್ದಕ್ಕೂ ವಿದೇಶಿ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಆದರೆ ಈ ಬಾರಿ ಮಾತ್ರ ಕೇಂದ್ರ ಸರಕಾರದ ನೋಟು ಅಮಾನ್ಯದ ಕ್ರಮದಿಂದಾಗಿ ಕೇರಳಕ್ಕೆ ಪ್ರವಾಸ ಬಂದಿರುವ ವಿದೇಶಿಯರು ಸಂಕಷ್ಟ ಅನುಭವಿಸುವಂತಾಗಿದೆ.

ಇತ್ತೀಚೆಗೆ ನಡೆದ ಘಟನೆಯೊಂದರ ವಿವರ ಇಲ್ಲಿದೆ. ಇಲ್ಲಿನ ರೆಸ್ಟಾರೆಂಟ್ ಒಂದರಲ್ಲಿ ಆಹಾರ ಸೇವಿಸಿದ್ದ ವಿದೇಶಿಯನೊಬ್ಬ ಕೈತೊಳೆಯಲು ಹೋದವ ಬಿಲ್ ಪಾವತಿಸದೆ ಹಾಗೆಯೇ ಹೋಗಲು ಪ್ರಯತ್ನಿಸಿದ್ದ. ಆತನನ್ನು ರೆಸ್ಟಾರೆಂಟ್ ಸಿಬ್ಬಂದಿ ಹಿಡಿದು ಬಿಟ್ಟರೂ ಆತನ ಬಳಿ ಹಣವಿಲ್ಲದ ಕಾರಣ ಆತ ಏನೂ ಮಾಡುವ ಸ್ಥಿತಯಲ್ಲಿರಲಿಲ್ಲ ಎಂದು ಅವರಿಗೆ ತಿಳಿದು ಬಂದು ಆತನನ್ನು ಹೋಗಬಿಟ್ಟರು.

ಇಂತಹುದೇ ಇನ್ನೊಂದು ಘಟನೆಂiÀiಲ್ಲಿ ಖಾದರ್ ಕುಂಜು ಎಂಬವರು 1989ರಿಂದ ನಡೆಸುತ್ತಿರುವ ರೆಸ್ಟಾರೆಂಟಿಗೆ ಇತ್ತೀಚೆಗೆ ಬಂದ ನಾಲ್ಕು ಮಂದಿ ಪುರುಷರು ಹಾಗೂ ಅಷ್ಟೇ ಸಂಖ್ಯೆಯ ಮಹಿಳೆಯರಿದ್ದ ಫ್ರೆಂಚ್ ಪ್ರವಾಸಿಗರ ತಂಡವೊಂದು ತಮಗೆ ಹಸಿವಾಗಿದೆ ಆದರೆ ತಮ್ಮ ಬಳಿ ನಗದು ಇಲ್ಲ ಎಂದು ಹೇಳಿದ್ದನ್ನು ಖಾದರ್ ನೆನಪಿಸುತ್ತಾರೆ.

“ಅವರು ತಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯೆಂದು ಹೇಳಿದರು, ಆದರೆ ನನ್ನ ಬಳಿ ಸ್ವೈಪ್ ಮೆಶಿನ್ ಇಲ್ಲದೇ ಇದ್ದುದರಿಂದ ನಾನು ಅವರಲ್ಲಿ  ಈಗ ಊಟ ಮಾಡಿ ಮುಂದೊಂದು ದಿನ ಹಣ ಪಾವತಿಸುವಂತೆ ಹೇಳಿದೆ” ಎಂದವರು ವಿವರಿಸಿದರು.