ವಿದೇಶಿ ಮದ್ಯ ವಶ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಸೋಡಾ ಫ್ಯಾಕ್ಟರಿಯ ಗೋದಾಮಿನೊಳಗೆ ಬಚ್ಚಿಟ್ಟಿದ್ದ ವಿದೇಶಿ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಅದರ ಮಾಲಕನನ್ನು ಬಂಧಿಸಿದ್ದಾರೆ.

ಕುಂಬಳೆ ಪೇಟೆಯ ಕ್ಷೇತ್ರ ರಸ್ತೆಯಲ್ಲಿರುವ ಮದ್ಯದಂಗಡಿಯೊಂದರ ಹಿಂಭಾಗದಲ್ಲಿರುವ ಸೋಡಾ ತಯಾರಿ ಫ್ಯಾಕ್ಟರಿಯ ಗೋದಾಮಿನಿಂದ 180 ಮಿಲಿಯ 22 ಬಾಟ್ಲಿ ವಿದೇಶ ಮದ್ಯವನ್ನು ವಶಪಡಿಸಲಾಗಿದೆ.

ಈ ಸಂಬಂಧ ಫ್ಯಾಕ್ಟರಿಯ ಮಾಲಕ ಕೊಯಿಪ್ಪಾಡಿ ಶೇಡಿಗುಮ್ಮೆ ನಿವಾಸಿ ರಮೇಶ್ (47) ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ಸ್ಪೆಷಲ್ ಸ್ಕ್ವಾಡ್ ಇನಸ್ಪೆಕ್ಟರ್ ನೇತೃತ್ವದಲ್ಲಿ ಫ್ಯಾಕ್ಟರಿಗೆ ದಾಳಿ ನಡೆಸಲಾಗಿದೆ. ಕ್ರಿಸ್ಮಸ್, ಹೊಸ ವರ್ಷಾಚರಣೆ ಮರೆಯಲ್ಲಿ ಜಿಲ್ಲೆಯ ವಿವಿಧೆಡೆ ವ್ಯಾಪಕ ಅನಧಿಕೃತ ಮದ್ಯ ಸಾಗಾಟ, ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ದಾಳಿ ತೀವ್ರಗೊಳಿಸುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

 

LEAVE A REPLY