ಹಫೀಜ್ ಕೊಲೆಗೆ ವಿದೇಶಿ ಏಜೆನ್ಸಿ ಸಂಚು : ಪಾಕ್

ಲಾಹೋರ್ : ವಿದೇಶಿ ಗುಪ್ತಚರ ಏಜೆನ್ಸಿಯೊಂದು ತನ್ನನ್ನು ಕೊಲ್ಲಲು ಸಂಚು ಹೂಡಿದೆ ಎಂದು ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಹೇಳಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನಿ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪಂಜಾಬ್ ಗೃಹ ಇಲಾಖೆಗೆ ಪತ್ರ ಬರೆದು ಸೂಚಿಸಿದ್ದಾರೆ. ಹಫೀಜ್ ಕೊಲೆಗೆ ವಿದೇಶಿ ಏಜೆನ್ಸಿಯೊಂದು ನಿಷೇಧಿತ ಉಗ್ರಗಾಮಿ ಗುಂಪೊಂದರ ಇಬ್ಬರಿಗೆ 80 ಮಿಲಿಯನ್ ಹಣ ನೀಡಿದೆ ಎಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರ ಪತ್ರದಲ್ಲಿ ಹೇಳಿದೆ. 1997 ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ ಹಫೀಜ್ ಜನವರಿ 30ರಿಂದ ಪಾಕಿಸ್ತಾನದಲ್ಲಿ ಗೃಹ ಬಂಧನದಲ್ಲಿದ್ದಾನೆ.