ಪ್ರಧಾನಿಗೆ ಆತಂಕವೂ ಹಾಸ್ಯದ ವಸ್ತು

ಇತ್ತೀಚೆಗೆ ಉತ್ತರಾಖಂಡ, ಹಿಮಾಚಲಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಕಂಪವಾಯಿತು. ಜನರು ತುಂಬಾ ಭಯಭೀತರಾಗಿದ್ದರು. ಇನ್ನೊಂದು ದೊಡ್ಡ ಭೂಕಂಪವಾಗುತ್ತದೋ ಎಂದು ಮರುದಿನವಿಡೀ ಜನರೆಲ್ಲ ಆತಂಕದಲ್ಲಿದ್ದರು.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಕೃತಿ ವಿಕೋಪ ಮತ್ತು ಜನರ ಆತಂಕವೂ ಲೇವಡಿ ವಿಷಯವಾಗಿತ್ತು. ಮೋದಿ ಅವರು ಸಂಸತ್ತಿನಲ್ಲಿ ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡುತ್ತಾ ರಾಹುಲ್ ಗಾಂಧಿ ಹೇಳಿದ ಭೂಕಂಪ ಬಂದೇಬಿಟ್ಟಿತು ಎಂದು ಪರಿಹಾಸ್ಯ ಮಾಡಿದರು.
ದೇಶದ ಜನರ ಸಂಕಷ್ಟ ಪ್ರಧಾನಿಗೆ ಅಪಹಾಸ್ಯದ ವಸ್ತುಗಳಾಗಿರುವುದು ನಿಜಕ್ಕೂ ಖೇದಕರ. ಮೋದಿ ನೋಟು ಅಮಾನ್ಯದ ನಂತರ ಜಪಾನ್ ದೇಶಕ್ಕೆ ಹೋದಾಗ ಅಲ್ಲಿ ಭಾರತೀಯರ ಮದುವೆಯ ಬಗ್ಗೆ ಪರಿಹಾಸ್ಯ ಮಾಡಿದ್ದರು. ನಿಮ್ಮ ನೋಟು ಅಮಾನ್ಯದ ಕ್ರಮದಿಂದ ಅನೇಕ ಭಾರತೀಯರ ಮದುವೆಗಳೂ ರದ್ದಾದವು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪತ್ರಕರ್ತರು ಮೋದಿಗೆ ಕೇಳಿದ ಪ್ರಶ್ನೆಯನ್ನೇ ಲೇವಡಿ ಮಾಡುತ್ತಾ ಮೋದಿ ಗಹಿಗಹಿಸಿ ನಕ್ಕಿದ್ದರು.
ಭಾರತದಲ್ಲಿ ನೋಟು ಅಮಾನ್ಯದಿಂದ ನಿಂತು ಹೋದ ಲಕ್ಷಾಂತರ ಹೆಣ್ಣು ಮಕ್ಕಳ ಹೆತ್ತವರ ಭಯ ಆತಂಕದ ಬಗ್ಗೆ ಮೋದಿಗೆ ಒಂದಿಷ್ಟೂ ಕಾಳಜಿ ಇಲ್ಲದಿರುವುದು ಅತ್ಯಂತ ಖಂಡನೀಯ

  • ಕೆ ಕೃಷ್ಣಪ್ರಸಾದ್  ಕಟಪಾಡಿ