ಫುಟ್ಪಾತ್ ಅತಿಕ್ರಮಣ ತೆರವು : ಮೇಯರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಂಗಡಿ, ಮಾಲ್, ಕಾಂಪ್ಲೆಕ್ಸ್ ಇತ್ಯಾದಿಗಳ ಅಕ್ಕಪಕ್ಕ, ಮನಪಾದ ಪಾರ್ಕಿಂಗ್, ಫುಟ್ಪಾತ್ ಅತಿಕ್ರಮಿಸಿಕೊಂಡಿರುವವರು ಶೀಘ್ರವೇ ಇದನ್ನು ತೆರವುಗೊಳಿಸಬೇಕೆಂದು ಮಂಗಳೂರು ಮೇಯರ್ ಕವಿತಾ ಸನಿಲ್ ಸೂಚನೆ ನೀಡಿದ್ದಾರೆ.

ಒಂದು ವಾರದೊಳಗಾಗಿ ಅಂಗಡಿ ಮಾಲಕರು ತಾವು ಅತಿಕ್ರಮಿಸಿಕೊಂಡಿರುವ ಜಾಗವನ್ನು ತೆರವು ಮಾಡದೇ ಇದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದರು.

“ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಲ್ಲಿ ಖಾಸಗಿ ವ್ಯಕ್ತಿಗಳು, ಕಾಂಪ್ಲೆಕ್ಸ್ ಮಾಲಕರು ತಮ್ಮ ಕಟ್ಟಡದ ಮುಂಭಾಗದಲ್ಲಿ ತಾವೇ ಬೋರ್ಡ್ ಹಾಕುವುದು, ರಾಡ್, ಚೈನ್ ಕಟ್ಟಿ ಪಾರ್ಕಿಂಗ್ ಜಾಗ ಎಂದು ಮಾಡಿಕೊಂಡಿದ್ದಾರೆ. ಇದು ಸರಿಯಲ್ಲ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು. ಒಂದು ವಾರದೊಳಗೆ ತೆರವುಗೊಳಿಸದೇ ಇದ್ದರೆ ಪಾಲಿಕೆಯೇ ಜಾಗ ತೆರವುಗೊಳಿಸಲಿದೆ“ ಎಂದು ಅವರು ಹೇಳಿದ್ದಾರೆ.

LEAVE A REPLY