ಪ್ರತಾಪ್ ಸಿಂಹನ ಮಾತನ್ನು ಸಾಕಾರಗೊಳಿಸಿದ ಉ ಕ ಜಿಲ್ಲೆಯ ಮೂರ್ಖರು

ಈ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದಾಗ ರಾಜ್ಯದ ಯುವ ಮೋರ್ಚಾ ಅಧ್ಯಕ್ಷ ಸಂಸದ ಪ್ರತಾಪ್ ಸಿಂಹಗೆ ನೀವು ಇಲ್ಲಿವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವ್ಯಾವ ರೀತಿ ಪ್ರತಿಭಟನೆ ಮಾಡಿದ್ದೀರಿ ಎಂದು ಕೇಳಿದರಂತೆ ಇದಕ್ಕೆ ಸಿಂಹ ಉತ್ತರ ನೀಡಿದಾಗ ತಡೆದ ಅಮಿತ್ ಶಾ ನಿಮ್ಮ ಪ್ರತಿಭಟನೆ ವೇಳೆ ಪೊಲೀಸರು ಎಷ್ಟು ಬಾರಿ ಲಾಠಿ ಚಾರ್ಜ್ ಮಾಡಿದ್ದಾರೆ ಅಶ್ರುವಾಯು ಎಷ್ಟು ಬಾರಿ ಸಿಡಿಸಿದ್ದಾರೆ ಎಂದು ಪ್ರಶ್ನಿಸಿದ್ದು ಇದುವರೆಗೆ ಆ ರೀತಿ ಆಗಿಲ್ಲ ಮುಂದೆ ನೀವು ಹೇಳಿದಹಾಗೆ ಪ್ರತಿಭಟಿಸುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದ ವಿಡಿಯೋ ವೈರಲ್ ಆಗಿತ್ತು ಇದೀಗ ಉತ್ತರ ಕನ್ನಡ ಜಿಲ್ಲೆಯ ಮೂರ್ಖ ಜನ ಸಿಂಹನ ಮಾತನ್ನು ಮತ್ತು ಅಮಿತ್ ಶಾ ಆದೇಶವನ್ನು ಸಾಕಾರಗೊಳಿಸಿದ್ದಾರೆ. ಶಾ ಆಶಯದಂತೆ ಈಗ ಉ ಕ ಜಿಲ್ಲೆಯ ಹೊನ್ನಾವರ ಕುಮಟಾ ಕಾರವಾರ ಮತ್ತು ಶಿರಸಿಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಅಶ್ರುವಾಯು ಸಿಡಿಸಿದ್ದಾರೆ 144 ಸೆಕ್ಷನ್ ಹಾಕಿದ್ದಾರೆ ಹೀಗೆಲ್ಲ ಆಗೋಕೆ ಸಂಘ ಪರಿವಾರ ಮತ್ತು ಬಿಜೆಪಿ ಕರೆಗೆ ಓಗೊಟ್ಟು ಇಷ್ಟೆಲ್ಲ ಜನ ಸೇರಿದ್ದೆ ಕಾರಣ ಹಾಗಾಗಿ ಉತ್ತರ ಕನ್ನಡದ ಜನ ಮೂರ್ಖರು ಎನ್ನದೆ ವಿಧಿಯಿಲ್ಲ

  • ಸಂತೋಷಕುಮಾರ್