ಸರ್ಫಿಂಗ್ : ಮಳಿಗೆ ತೆರೆಯಲು ಅವಕಾಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಾಲೂಕಿನ ಸಸಿಹಿತ್ಲು ಕಡಲತೀರದಲ್ಲಿ ಮೇ 26, 27 ಹಾಗೂ 28ರಂದು ನಡೆಯಲಿರುವ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟದಲ್ಲಿ ಆಹಾರ ಉತ್ಸವ ಸಮಿತಿ ವತಿಯಿಂದ ಸಸಿಹಿತ್ಲು ಕಡಲ ಕಿನಾರೆ ವಠಾರದಲ್ಲಿ 14 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಮಳಿಗೆಗಳಲ್ಲಿ ಸ್ಥಳೀಯ ಆಹಾರೋತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಮೇ 24ರ ಸಂಜೆ 5 ಗಂಟೆಯೊಳಗೆ ಪ್ರತಿ ಮಳಿಗೆಗೆ ರೂ 10,000 ಮುಂಗಡ ಪಾವತಿಸಿ ಅಂಗಡಿ ಮಳಿಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಆಸಕ್ತರು ಉಪಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ, ಮಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.