ಪಡುಪಣಂಬೂರು ಗ್ರಾಮ ಸಭೆಯಲ್ಲಿ ಆಹಾರ ಇಲಾಖಾಧಿಕಾರಿ ತರಾಟೆಗೆ

ಪಡುಪಣಂಬೂರು ಗ್ರಾಮ ಸಭೆಯಲ್ಲಿ ಪಡಿತರ ಇಲಾಖೆ ಬಗ್ಗೆ ಗಂಭೀರ ಚರ್ಚೆ ನಡೆಯಿತು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಪಡುಪಣಂಬೂರು ಗ್ರಾಮ ಪಂಚಾಯತ್ ಎರಡನೇ ಹಂತದ ಗ್ರಾಮ ಸಭೆಯಲ್ಲಿ ಉಜಾಲ ಗ್ಯಾಸ್ ಸಂಪರ್ಕ ಯೋಜನೆಯಲ್ಲಿ ಪಲಾನು¨Àವಿಗಳ ಆಯ್ಕೆ ಗೊಂದಲ, ಎಪಿಎಲ್-ಬಿಪಿಎಲ್ ಕಾರ್ಡುಗಳ ಗೊಂದಲ, ಕೃಷಿ ಬಿತ್ತನೆ ಬೀಜದ ಕೊರತೆ, ವಿದ್ಯುತ್ ಕಡಿತ, ಕೆರೆಕಾಡಿನ ರಸ್ತೆ ಬದಿಯಲ್ಲಿನ ಮರದ ಗೆಲ್ಲುಗಳನ್ನು ಕಡಿದು ರಸ್ತೆಗೆ ಎಸೆಯುವ ಮೆಸ್ಕಾಂ ಇಲಾಖೆ, ಕಂಬಳಬೆಟ್ಟು, ತೋಕೂರು, ಪಲ್ಲಿಗುಡ್ಡೆಯಲ್ಲಿ ಅಕ್ರಮ ಚಟುವಟಿಕೆ, ರಸ್ತೆ ಬದಿಯ ಚರಂಡಿ ಮುಚ್ಚಿರುವುದು, ಕೆರೆಕಾಡು ಜಳಕದ ಕೆರೆ ಸಂಪರ್ಕದ ರಸ್ತೆಗೆ ಡಾಮರೀಕರಣ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಹಲವು ಗ್ರಾಮಸಭೆಗೆ ಆಹಾರ ಇಲಾಖೆ ಅಧಿಕಾರಿಗಳು ಗೈರಾಗುತ್ತಿದ್ದು, ಗ್ರಾಮಸ್ಥರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ಅಧಿಕಾರಿ ವಾಸು ಶೆಟ್ಟಿ, “ಆಹಾರ ಇಲಾಕೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಇದರಿಂದಾಗಿ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಪಡುಪಣಂಬೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಒತ್ತಾಯ ಮಾಡಿದ ಕಾರಣ ಈ ಸಭೆಗೆ ಹಾಜರಾಗಿz್ದÉೀನೆ” ಎಂದರು.

ಬಳಿಕ ಮಾತನಾಡಿದ ಗ್ರಾಮಸ್ಥರೊಬ್ಬರು, “ಉಡುಪಿಯಿಂದ ಕಳೆದ 6 ವರ್ಷಗಳ ಹಿಂದೆ ಬಂದ ನಾನು ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿz್ದÉೀನೆ. ಆದರೆ, ಈವರೆಗೂ ನನ್ನ ಪಡಿತರ ಚೀಟಿ ವರ್ಗಾವಣೆಯಾಗಿಲ್ಲ. ಈ ಬಗ್ಗೆ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆಗೆ 6 ವರ್ಷಗಳಿಂದ ಸುತ್ತಾಡಿ ಸುಸ್ತಾಗಿದೆ. ಮುಂದೇನು ಎಂದು ತೋಚುತ್ತಿಲ್ಲ. ವಿಚಾರಿಸಲು ಎಲ್ಲಾ ಗ್ರಾಮ ಸಭೆಗಳಿಗೆ ಹಾಜರಾದರೂ ಅಧಿಕಾರಿಗಳ ಗೈರಿನಿಂದಾಗಿ ಮಾಹಿತಿ ದೊರೆಯುತ್ತಿಲ್ಲ” ಎಂದು ದೂರಿದರು.

ಆ ವೇಳೆ ಮಾತನಾಡಿದ ಆಹಾರ ಇಲಾಖಾಧಿಕಾರಿ ವಾಸು ಶೆಟ್ಟಿ, “ಮಂಗಳೂರು ಕಚೇರಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದು ಸೂಚಿಸಿದರು.

ಪಡಿತರ ಪಡೆಯಲು ತೆರಳಿದರೆ ಪಡಿತರ ಕಾರ್ಡ್ ರದ್ದಾಗಿದೆ ಎನ್ನುತ್ತಾರೆ. ಹೊಸ ಕಾರ್ಡ್ ಯಾವಾಗ ಬರುವುದು ಎಂಬ ಮಾಹಿತಿಯೂ ನೀಡುತ್ತಿಲ್ಲ. ಅಲ್ಲದೆ, ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯಲ್ಲಿ ಪಡಿತರ ಅಂಗಡಿಯೂ ಇಲ್ಲ ಎಂದು ಗ್ರಾಮಸ್ಥರೊಬ್ಬರು ಅಧಿಕಾರಿಯನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ಸಿಗದೆ ಆಕ್ರೋಶ ವ್ಯಕ್ತಪಡಿಸಿದರು.