7 ತಿಂಗಳ ಶಿಶು ಹೊಟ್ಟೆಯಲ್ಲಿ 100 ಗ್ರಾಂ ತೂಕದ ಭ್ರೂಣ

ಹೈದರಾಬಾದ್ : ಆಶ್ಚರ್ಯಕಾರಿ ವಿದ್ಯಮಾನವೊಂದರಲ್ಲಿ ಏಳು ತಿಂಗಳ ಮಗುವೊಂದರ ಹೊಟ್ಟೆಯಿಂದ 100 ಗ್ರಾಂ ತೂಕವಿದ್ದ ಭ್ರೂಣವೊಂದನ್ನು ಇಲ್ಲಿನ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

ಶಿಶು ಹಲವು ದಿನಗಳಿಂದ ನೋವಿನಿಂದ ಅಳುತ್ತಿರುವುದನ್ನು ಗಮನಿಸಿದ ನಿಜಾಮಬಾದ್ ನಗರದ ಕೃಷಿ ಅಧಿಕಾರಿಗಳಾದ ಅದರ ಹೆತ್ತವರು ಹೈದರಾಬಾದ್ ಆಸ್ಪತ್ರೆಗೆ ಧಾವಿಸಿದ್ದರು. ಸ್ಕ್ಯಾನಿಗ್ ಮಾಡಿದಾಗ ಮಗುವಿನ ಹೊಟ್ಟೆಯಲ್ಲ್ಲಿ ಕೂದಲು ಮತ್ತು ಕೈಕಾಲುಗಳಿದ್ದ ಭ್ರೂಣವಿರುವುದು ಪತ್ತೆಯಾಗಿತ್ತು. ಮಗುವಿನ ತಾಯಿ ಗರ್ಭಿಣಿಯಾಗಿದ್ದಾಗ ಆಕೆಯ ಗರ್ಭದಲ್ಲಿ ಎರಡು ಭ್ರೂಣಗಳಿದ್ದು, ಅವುಗಳಲ್ಲಿ ಒಂದು ಭ್ರೂಣ ಬೆಳೆದರೆ ಇನ್ನೊಂದು ಭ್ರೂಣ ಅದರ ಹೊಟ್ಟೆಯೊಳಗೆ ಹೋಗಿರಬೇಕೆಂದು ಊಹಿಸಲಾಗಿದೆ.
ಹಿರಿಯ ಮಕ್ಕಳ ತಜ್ಞ ನರೇಂದ್ರ ಕುಮಾರ್ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಭ್ರೂಣದಲ್ಲಿ ಸ್ವಲ್ಪ ಕೂದಲು, ತಲೆಯ ಆಕಾರ, ಕೈ, ಕಾಲುಗಳು ಹಾಗೂ ಉಗುರುಗಳಿದ್ದವೇ ಹೊರತು ಹೃದಯ, ಲಿವರ್, ಕಿಡ್ನಿಯಂತಹ ಯಾವುದೇ ಪ್ರಮುಖ ಅಂಗಗಳಿರಲಿಲ್ಲ.
ಇಂತಹುದೇ ಇನ್ನೊಂದು ಶಸ್ತ್ರಕ್ರಿಯೆಯನ್ನು ಡಾ ಕುಮಾರ್ ಈ ಹಿಂದೆ 1999ರಲ್ಲಿ ನಡೆಸಿದ್ದರು. ವಿಶ್ವದಾದ್ಯಂತ ಇಲ್ಲಿಯವರೆಗೆ ಇಂತಹ ಕೇವಲ 100 ಪ್ರಕರಣಗಳು ವರದಿಯಾಗಿವೆ.
ಒಕೆ