ಯುವತಿಯ ಮುಂಗಡ ಫಿಕ್ಸ್ ಮಾಡಿ ಹೋದವಗೆ ಲಾಡ್ಜಿನಲ್ಲಿ ಸಿಕ್ಕವಳು ಒಡಹುಟ್ಟಿದ ತಂಗಿ !

ಉಜಿರೆಯಲ್ಲಿ ಅನೈತಿಕ ದಂಧೆ `ಸುಗಮ’

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮಾಲಕ ಸಿಬ್ಬಂದಿಯೊಂದಿಗೆ ದೂರವಾಣಿ ಮೂಲಕ ಚೌಕಾಶಿ ನಡೆಸಿ ಮುಂಗಡವಾಗಿ ಯುವತಿಯರನ್ನು ಫಿಕ್ಸ್ ಮಾಡಿಕೊಂಡು ಆಗಾಗ ಲಾಡ್ಜಿಗೆ ಹೋಗಿ ಮಜಾ ಉಡಾಯಿಸುತ್ತಿದ್ದ ಯುವಕನೊಬ್ಬ ಎಂದಿನಂತೆ ದೂರವಾಣಿ ಮೂಲಕ ಯುವತಿಯನ್ನು ಫಿಕ್ಸ್ ಮಾಡಿಕೊಂಡು ಲಾಡ್ಜಿಗೆ ಹೋಗಿ ರೂಮ್ ಬಾಗಿಲು ತೆರೆದಾಗ ಒಡ ಹುಟ್ಟಿದ ತಂಗಿಯೇ ಪ್ರತ್ಯಕ್ಷಳಾಗಿದ್ದು, ಯುವಕ ಆಘಾತಕ್ಕೊಳಗಾಗಿ ಲಾಡ್ಜ್ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ ಸ್ವಾರಸ್ಯಕರ ಘಟನೆಯೊಂದು ಉಜಿರೆ ಹಳೆ ಪೇಟೆಯ ಲಾಡ್ಜ್ ಒಂದರಲ್ಲಿ ನಡೆದಿದ್ದು, ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಉಜಿರೆಯ ಕೆಲ ಲಾಡ್ಜುಗಳಲ್ಲಿ ಸ್ಥಳೀಯ ಹಾಗೂ ಬೇರೆ ತಾಲೂಕು, ಜಿಲ್ಲೆಗಳ ವಿದ್ಯಾರ್ಥಿನಿಯರನ್ನು, ಯುವತಿಯರನ್ನು ಬಳಸಿಕೊಂಡು ಅನೈತಿಕ ದಂಧೆಯು `ಸುಗಮ’ವಾಗಿ ನಡೆಯುತ್ತಿರುವ ಬಗ್ಗೆ ಆರೋಪಗಳು ಆಗಾಗ ಕೇಳಿ ಬರುತ್ತಿದೆ. ಬೆಳ್ತಂಗಡಿ-ಉಜಿರೆ ಮಧ್ಯೆ ರಸ್ತೆ ಬದಿಯ ದೇವಸ್ಥಾನವೊಂದರ ಸನಿಹದಲ್ಲಿರುವ ರಾಜಕೀಯ ಪ್ರಭಾವಿ ವ್ಯಕ್ತಿಯ ಮಾಲಕತ್ವದ ಲಾಡ್ಜ್ ಕೂಡಾ ಇಂಥ ಕೃತ್ಯಕ್ಕೆ ಸುರಕ್ಷಿತ ಅವಕಾಶ ನೀಡುತ್ತಿದೆ ಎಂಬ ಆರೋಪವೂ ಇದೆ.

ಇನ್ನೊಂದು ವಿಚಾರವೆಂದರೆ ಸಲ್ಲಬೇಕಾದವರಿಗೆ ಖಾಯಂ ಕಪ್ಪ ಕಾಣಿಕೆ ಸಲ್ಲಿಸಿ ಉಜಿರೆ ಸುತ್ತಮುತ್ತಲಿನ ಕೆಲವು ಲಾಡ್ಜುಗಳು ನಿರ್ಭೀತವಾಗಿ ಅನೈತಿಕ ಚಟುವಟಿಕೆಗೆ ಬ್ರೋಕರುಗಳ ಮೂಲಕ ಯುವತಿಯರನ್ನು ಫಿಕ್ಸ್ ಮಾಡಿಕೊಂಡು ದಂಧೆಯಲ್ಲಿ ತೊಡಗಿದ್ದು, ಇದೇ ರೀತಿ ಯುವಕನೊಬ್ಬ ಎಂದಿನಂತೆ ಬ್ರೋಕರ್ ಮೂಲಕ ಯುವತಿಯೊಬ್ಬಳನ್ನು ಫಿಕ್ಸ್ ಮಾಡಿಕೊಂಡು ಲಾಡ್ಜಿಗೆ ಹೋದಾಗ ರೂಮಿನಲ್ಲಿ ಒಡ ಹುಟ್ಟಿದ ತಂಗಿಯೇ ಎದುರಾಗಿ ಇಬ್ಬರೂ ಆಘಾತಗೊಂಡು ಇದೇ ವಿಚಾರದಲ್ಲಿ ಲಾಡ್ಜಿನಲ್ಲಿ ಜಗಳ ಮಾಡಿ ವಾಪಾಸಾದ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯಗೊಂಡಿರುವ ಉಜಿರೆ ಅನೈತಿಕ ದಂಧೆಕೋರರ ತಾಣವಾಗುತ್ತಿದೆಯೇ ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ.