ನೆಕ್ಕಿಲಾಡಿ ಬಳಿ ಕಾರುಗಳ ಡಿಕ್ಕಿ : ಐವರಿಗೆ ಗಾಯ, ಒಬ್ಬ ಗಂಭೀರ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ 34 ನೇ ನೆಕ್ಕಿಲಾಡಿಯ ಕೊಡಿಪ್ಪಾಡಿ ಮಸೀದಿ ಬಳಿ ಕಾರುಗಳೆರಡು ಡಿಕ್ಕಿಯಾದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬನ  ಸ್ಥಿತಿ ಗಂಭೀರವಾಗಿದೆ.

ಗಾಯಾಳುUಳು ಕುಂತೂರು ನಿವಾಸಿ ಅಬ್ದುಲ್ಲಾ ಹಾಗೂ ತುಮಕೂರಿನ ತಿಪಟೂರು ನಿವಾಸಿಗಳಾದ ಪವಿತ್ರಾ (22), ಚಂದ್ರಕಾಂತ್ (31), ಯೊಗೀಶ್ (18), ಸತೀಶ್ ಕುಮಾರ್ (48), ಸವಿತಾ (31).  ಗಾಯಾಳುಗಳ ಪೈಕಿ ಅಬ್ದುಲ್ಲಾ ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಗಳೂರಿನಲ್ಲಿ  ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಪಟೂರಿನ ನಿವಾಸಿಗಳು ಇಕೋ ಕಾರಿನಲ್ಲಿ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದಾಗ ಏಕಾಏಕಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಲ್ಲಿ ಬಂದ ಮಾರುತಿ 800 ಕಾರು ತಿಪಟೂರು ನಿವಾಸಿಗಳಿದ್ದ ಇಕೋ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಿಂದ ಮಾರುತಿ 800 ಕಾರು ನಜ್ಜುಗುಜ್ಜಾಗಿದೆ.