ಕ್ರೆಡಿಟ್ ಕಾರ್ಡ್ ಮೋಸ ಜಾಲದ ಐವರ ಬಂಧನ

ನವದೆಹಲಿ : ಇ-ವ್ಯಾಲೆಟ್ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಹೇಳಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಜನರಿಗೆ ಮೋಸ ಮಾಡುತ್ತಿದ್ದ ಗ್ಯಾಂಗೊಂದರ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಬ್ಯಾಂಕ್ ಖಾತೆಯಿಂದ ಇತ್ತೀಚೆಗೆ 44,949 ರೂ ಡೆಬಿಟ್ ಆಗಿದ್ದು, ಈ ಬಗ್ಗೆ ಮೋಸ ಹೋಗಿರುವ ದ್ವಾರಕಾದ ಸೆಕ್ಟರ್ ನಂಬ್ರ 17ರ ನಿವಾಸಿ ಕುಲದೀಪ್  ಪೊಲೀಸರಿಗೆ ದೂರು ನೀಡಿದ್ದರು.