ಬೋಟಿನಿಂದ ಬಿದ್ದು ಮೀನುಗಾರ ಸಾವು

ಭಟ್ಕಳ : ಮುರ್ಡೇಶ್ವರದ ನೇತ್ರಾಣಿ ಗುಡ್ಡದ ಸಮೀಪದ ಅರಬ್ಬೀ ಸಮುದ್ರದಲ್ಲಿ ಬೋಟಿನಲ್ಲಿ ಮೀನುಗಾರಿಕೆಗೆ ಬಲೆ ಹಾಕುತ್ತಿದ್ದ ಸಂದರ್ಭದಲ್ಲಿ ಮೀನುಗಾರನೊಬ್ಬ ಆಕಸ್ಮಿಕವಾಗಿ ನೀರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಭಟ್ಕಳ ಸೋಡಿಗದ್ದೆಯ ನಿವಾಸಿ ದಿನೇಶ ವೆಂಕಟಪ್ಪ ಮೊಗೇರ ಮೃತಪಟ್ಟವ. ಈತ ರವಿವಾರ ಬೆಳಗಿನ ಜಾವ ಮುರ್ಡೇಶ್ವರದ ನೇತ್ರಾಣಿ ಸಮೀಪದಲ್ಲಿ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮುದ್ರಕ್ಕೆ ಬಲೆ ಹಾಕಿದ ಸಮಯದಲ್ಲಿ ಈತ ಬೋಟಿನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದ. ಈತನನ್ನು ಬದುಕಿಸಲು ಇತರೇ ಮೀನುಗಾರರು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ನಂತರ ಸಮುದ್ರದಲ್ಲಿ ಸಿಕ್ಕ ಈತನ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಯ ಬಗ್ಗೆ ಮುಂಡಳ್ಳಿಯ ಜಯಂತ ನಾಗಪ್ಪ ಮೊಗೇರ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.