ಮೀನುಗಾರಗೆ ಮಾರಣಾಂತಿಕ ಹಲ್ಲೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಲ್ಪೆ ಬಂದರಿನ ಧಕ್ಕೆಯಲ್ಲಿ ನಿಲ್ಲಿಸಿದ್ದ ಸುಮಂಗಳ ಹೆಸರಿನ ಬೋಟೊಂದನ್ನು ಹಿಂದಕ್ಕೆ ತಳ್ಳಿ ಆ ಬೋಟಿನ ಮೀನುಗಾರಗೆ ಇನ್ನೊಂದು ಬೋಟಿನ ಇಬ್ಬರು ಮೀನುಗಾರರು ಮಾರಣಾಂತಿಕ ಹಲ್ಲೆಗೈದ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಮಲ್ಪೆಯ ಕೊಪ್ಪಲ ತೋಟ ನಿವಾಸಿ ರಾಮ ಸಿ ಕರ್ಕೇರ ಹಲ್ಲೆಗೊಳಗಾದವರು. ನಾಗೇಶ್ ಕುಂದರ್ ಮತ್ತು ಶಿವರಾಜ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳು. ರಾಮ ಕರ್ಕೇರ ಮಲ್ಪೆಯ ಸುಮಂಗಳ ಬೋಟಿನಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದು, ಬೋಟನ್ನು ಮಲ್ಪೆ ಬಂದರಿನ

ಧಕ್ಕೆಗೆ ಕಟ್ಟಿದ್ದು, ಇನ್ನೊಂದು ಬೋಟಿನ ಮೀನುಗಾರರಾದ ನಾಗೇಶ ಕುಂದರ್ ಮತ್ತು ಶಿವರಾಜ ಎಂಬವರು ಸೇರಿಕೊಂಡು, ರಾಮ ಕರ್ಕೇರ ಕಟ್ಟಿದ ಬೋಟಿನ ರೋಪನ್ನು ಬಿಚ್ಚಿ ಗೇರ್ ಹಾಕಿ ಬೋಟನ್ನು ಹಿಂದಕ್ಕೆ ತಳ್ಳಿದ್ದಾರೆ. ಇದನ್ನು ಪ್ರಶ್ನಿಸಿದ ರಾಮ ಕರ್ಕೇರಗೆ ಆರೋಪಿಗಳು ಮಾರಣಾಂತಿಕ ಹಲ್ಲೆಗೈದಿದ್ದಾರೆ. ಹಲ್ಲೆಗೊಳಗಾದ ರಾಮ ಕರ್ಕೇರ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY