ಅಜೀರ್ಣ ಸ್ಥಿತಿಯಲ್ಲಿ ಮೀನು ಮಾರುಕಟ್ಟೆ

ಪಂಡಿತ್ ಹರಿಭಟ್ ರಸ್ತೆಯಲ್ಲಿರುವ ಬರುವ ಹಳೆಯಂಗಡಿ ಮೀನಿನ ಮಾರ್ಕೆಟ್‍ನ ನಿರ್ವಹಣೆ ತುಂಬಾ ಕಳಪೆಯಾಗಿದೆ.
ಮಾರ್ಕೆಟ್ ಒಳಗೆ ನೆಲಕ್ಕೆ ಹಾಕಿದ ಸಿಮೆಂಟ್ ಪೂರಾ ಎದ್ದು ಹೋಗಿ ಮಾರ್ಕೆಟಿಗೆ ಬರುವ ಜನರಿಗೆ ಕಾಲಿಗೆ ತಾಗುತ್ತಿದೆ. ಕೋಳಿ ಅಂಗಡಿ ಎದುರುಗಡೆ ಮೀನಿನ ಕೊಚ್ಚೆ ನೀರು ಹರಿದು ಹೋಗದೇ ಒಂದು ಕಡೆ ಸಂಗ್ರಹಗೊಂಡು ಗಬ್ಬು ವಾಸನೆ ಬರುತ್ತಿದೆ. ಮಾರ್ಕೆಟಿನಲ್ಲಿ ಶುಚಿತ್ವ ಎಂಬುದೇ ಮರೆತಂತಿದೆ. ಮಾರ್ಕೆಟ್ ಗೋಡೆಗೆ ಸುಣ್ಣ ಬಳಿಯದೇ ತುಂಬಾ ಸಮಯ ಆಗಿದೆ. ಮಾರ್ಕೆಟ್ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ದಿನಗಳೆದಂತೆ ಮಾರ್ಕೆಟ್ ಸ್ಥಿತಿ ತೀರಾ ಶೋಚನೀಯ ಸ್ಥಿತಿಯಲ್ಲಿದೆ. ಈ ಏರಿಯಾದ ಪಂಚಾಯತ್ ಸದಸ್ಯರು ಮಾರ್ಕೆಟ್‍ನ ಸ್ಥಿತಿಗತಿ ಗಮನಿಸದಿರುವುದು ಚೋದ್ಯ

  • ಪ್ರಶಾಂತ್ ಸುವರ್ಣ  ಹಳೆಯಂಗಡಿ