ಅಂಗಡಿಗೆ ಬೆಂಕಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೋವಿಕ್ಕಾನದಲ್ಲಿ ಬಿಜೆಪಿ ಬೆಂಬಲಿಗ, ಪರವನಡ್ಕ ನಿವಾಸಿಯಾಗಿರುವ ಪ್ರಸ್ತುತ ಬೋವಿಕ್ಕಾನ ತೇಜಸ್ ಕಾಲೊನಿಯಲ್ಲಿ ವಾಸಿಸುತ್ತಿರುವ ರಾಜನ್ ಅವರ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ

ಮಂಗಳಾ ಬುಕ್ಸ್ ಆ್ಯಂಡ್ ಐಸ್ ಕ್ರೀಂ ಅಂಗಡಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಫ್ರೀಜರ್ ಸಂಪೂರ್ಣ ಉರಿದು ಹೋಗಿದೆ. ಸುಮಾರು 50 ಸಾವಿರ ರೂ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.