ಮನೆಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಕುಂತೂರು ಪದವು ಎಂಬಲ್ಲಿನ ಮನೆಗೆ ಆಕಸ್ಮಿಕ ಬೆಂಕಿ ಹಿಡಿದ ಪರಿಣಾಮ ಮನೆ ಸಂಪೂರ್ಣ ಹೊತ್ತಿ ಉರಿದು, ಲಕ್ಷಾಂತರ ರೂ ನಷ್ಟ ಉಂಟಾದ ಘಟನೆ ನಡೆದಿದೆ.

ಎರ್ಮಾಲ ನಿವಾಸಿ ಸುಂದರ ಗೌಡ ಎಂಬವರ ಮನೆಯು ಬೆಂಕಿ ಆಕಸ್ಮಿಕದಿಂದಾಗಿ ಹೊತ್ತಿ ಭಸ್ಮವಾಗಿದ್ದು, ಅಡಿಕೆ, ರಬ್ಬರ್ ಸೇರಿದಂತೆ ಲಕ್ಷಾಂತರ ರೂ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದಾಗ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ 10 ಗೋಣಿ ಅಡಿಕೆ, ಒಂದು ಕ್ವಿಂಟಾಲ್ ಒಣ ಅಡಿಕೆ, 3000 ತೆಂಗಿನಕಾಯಿ, ಕೃಷಿ ಉಪಕರಣಗಳು ಸೇರಿದಂತೆ ಅಪಾರ ಸೊತ್ತುಗಳು ಬೆಂಕಿಗೆ ಸುಟ್ಟುಹೋಗಿವೆ. ಸುದ್ದಿ ತಿಳಿದ ಊರವರು ಬೆಂಕಿ ನಂದಿಸಲೆತ್ನಿಸಿದರಾದರೂ ಅದಾಗಲೇ ಮನೆ ಪೂರ್ತಿ ಸುಟ್ಟುಹೋಗಿತ್ತು.