ಫ್ಲೈವುಡ್ ನಿರ್ಮಾಣ ಕೇಂದ್ರ ಬೆಂಕಿಗಾಹುತಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಫ್ಲೈವುಡ್ ನಿರ್ಮಾಣ ಕೇಂದ್ರವೊಂದು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ನಷ್ಟಗೊಂಡ ಘಟನೆ ಉಪ್ಪಳ ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

mjr6-_fire2

ಉಪ್ಪಳ ಕೈಕಂಬ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಅಬೂಬಕ್ಕರ್ ಹಾಜಿ ಎಂಬವರ ಮಾಲಕತ್ವದಲ್ಲಿರುವ ಬೋಂಬೆ ಟಿಂಬರ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಫ್ಲೈವುಡ್ ನಿರ್ಮಾಣ ಕೇಂದ್ರ ಬೆಂಕಿಗಾಹುತಿಯಾಗಿದೆ.

ಮಂಗಳವಾರ ಮುಂಜಾನೆ 3 ಗಂಟೆಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ಅಂದಾಜಿಸಲಾಗಿದೆ. ಆದರೆ ಇದು ಸುಮಾರು ಒಂದು ತಾಸಿನ ಬಳಿಕ ಪರಿಸರವಾಸಿಗಳ ಗಮನಕ್ಕೆ ಬಂದಿದೆ. ಬಳಿಕ ಸ್ಥಳೀಯರ ಮಾಹಿತಿಯಂತೆ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ತಾಸುಗಳ ತನಕ ಹರಸಾಹಸಪಟ್ಟು ಬೆಂಕಿ ಆರಿಸಿದ್ದಾರೆ.

ಆದರೆ ಫ್ಲೈವುಡ್ ನಿರ್ಮಾಣ ಕೇಂದ್ರದೊಳಗಿದ್ದ ಬೆಲೆಬಾಳುವ ಮರಗಳ ಸಹಿತ ಹಲವಾರು ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಸುಮಾರು 10 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ. ಈ ಮಿಲ್ ಹಿಂಭಾಗದ ಸಮೀಪದಲ್ಲೇ ಕ್ಯಾಂಟೀನೊಂದು ಕಾರ್ಯಾಚರಿಸುತಿದ್ದು, ಇಲ್ಲಿಂದ ಅಡುಗೆ ಮಾಡುವ ಸಂದರ್ಭ ಬೆಂಕಿ ಪ್ರಸರಿಸಿ ಬೆಂಕಿತಗಲಿರಬಹುದಾಗಿ ಶಂಕಿಸಲಾಗಿದೆ.