ಕೊಕ್ಕಡ ರಬ್ಬರ್ ತೋಟಕ್ಕೆ ಬೆಂಕಿ: ಸಾವಿರಕ್ಕೂ ಮಿಕ್ಕಿ ಮರ ಭಸ್ಮ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ  ಮಡೆಂಜೋಡಿ ಅಬ್ದುಲ್ ರಹಿಮಾನ್ ಎಂಬವರ ರಬ್ಬರ್ ತೋಟಕ್ಕೆ  ಆಕಸ್ಮಿಕವಾಗಿ ಬೆಂಕಿ  ತಗಲಿದ್ದು ಸಾವಿರಕ್ಕೂ ಮಿಕ್ಕಿ ರಬ್ಬರ್ ಮರಗಳು ಬೆಂಕಿಗಾಹುತಿಯಾಗಿದೆ.

ರಸ್ತೆ ಬದಿಯಲ್ಲಿ ಇದೇ ರಬ್ಬರ್ ತೋಟವಿದ್ದು ಈ ಭಾಗದಲ್ಲಿ ಊಟದ ತಟ್ಟೆಗಳು ಮುಂತಾದ ತ್ಯಾಜ್ಯಗಳನ್ನು ತಂದು ಸುರುವಲಾಗಿದ್ದು ಈ ತ್ಯಾಜ್ಯದ ರಾಶಿಗೆ ಬೆಂಕಿ ಹತ್ತಿ ನಂತರ ರಬ್ಬರ್ ತೋಟಕ್ಕೂ ವ್ಯಾಪಿಸಿರಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ರಬ್ಬರ್ ತೋಟದ ಅಕ್ಕಪಕ್ಕದ ರಬ್ಬರ್ ತೋಟಗಳಿಗೂ ಇದೇ ಬೆಂಕಿ ಹರಡಿದ್ದು ಸಾರ್ವಜನಿಕರ ಸಕಾಲಿಕ ಪ್ರಯತ್ನದಿಂದ ಮತ್ತಷ್ಟು ಬೆಂಕಿ ಹರಡಲಿಲ್ಲ.