ಹುಲ್ಲು ಪ್ರದೇಶಕ್ಕೆ ಬೆಂಕಿ : ತಪ್ಪಿದ ಭಾರೀ ದುರಂತ

ಸ್ಥಳೀಯರೇ ಬೆಂಕಿ ಆರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತಲಪಾಡಿ ಹಾಗೂ ತೂಮಿನಾಡು ಮಧ್ಯೆ ಇರುವ ಕೇರಳ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಒಣ ಹುಲ್ಲುಗಾವಲಿನ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದಿದೆ.

ಬೆಂಕಿ ಧಗಧಗನೆ ಉರಿದು ಸಮೀಪ ಪ್ರದೇಶ ವ್ಯಾಪಿಸಿದಾಗ ಅಗ್ನಿಶಾಮಕದಳಕ್ಕೆ ಪೆÇೀನ್ ಕರೆ ಮಾಡಲಾಯಿತು. ಆದರೆ “ನಮಲ್ಲಿ ವಾಹನವಿಲ್ಲ, ನೀವೇ ಬೆಂಕಿ ಆರಿಸಿ” ಎಂಬ ಉತ್ತರ ಬಂದಿದೆ. ಬೆಂಕಿ ಹತ್ತಿಕೊಂಡ ಪಕ್ಕದಲೇ ಅರಣ್ಯ ಇಲಾಖೆ ಕಚೇರಿ, ಆರ್ ಟಿ ಓ ಕಚೇರಿ, ಮರದ ಮಿಲ್ ಸೇರಿದಂತೆ ಹಲವಾರು ಕಚೇರಿಗಳು ಕಾರ್ಯಚರಿಸುತ್ತಿವೆ.

ಬೆಂಕಿ ಆರಿಸಲು ಊರವರು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಬಳಿಕ ಮಂಜೇಶ್ವರ ಪೆÇಲೀಸರೂ ಆಗಮಿಸಿ ಮೂರು ತಾಸು ಕಳೆದರೂ ಅಗ್ನಿಶಾಮಕ ಬಂದಿರಲಿಲ್ಲ. ಬಳಿಕ ಊರವರು ಪೈಪಿನಲ್ಲಿ ನೀರನ್ನು ಹಾಕಿ ಬೆಂಕಿ ಆರಿಸಲು ಯತ್ನಿಸಿದರು. ಉಪ್ಪಳದ ಅಗ್ನಿಶಾಮಕದಳದಲ್ಲಿ ಎರಡೇ ವಾಹನ ಇರುವುದರಿಂದ ಮಂಜೇಶ್ವರ ತಾಲೂಕು ವ್ಯಾಪ್ತಿಯಲಿ ಎಲ್ಲೇ ಬೆಂಕಿ ಹತ್ತಿಕೊಂಡರೂ ಈ ಎರಡು ವಾಹನಗಳು ಮಾತ್ರ ಹೋಗುತ್ತದೆ. ಮಂಜೇಶ್ವರದಲ್ಲೂ ಒಂದು ಅಗ್ನಿಶಾಮಕದಳ ಕಚೇರಿ ಸ್ಥಾಪನೆಯಾಗಬೇಕೆಂಬುದು ಊರವರು ಆಗ್ರಹಿಸಿದ್ದಾರೆ.