ಸರಕಾರಿ ಸ್ಥಳಕ್ಕೆ ಬೆಂಕಿ, ತಪ್ಪಿದ ಭಾರೀ ದುರಂತ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಬದಿಯಡ್ಕ ಸಮೀಪದ ಕಾಸರಗೋಡು ರಸ್ತೆ ಬದಿಯ ಪೆಯ್ಯೆಕಂಡ ಎಂಬಲ್ಲಿ ಬುಧವಾರ ಸಂಜೆ 4.30ಕ್ಕೆ ಅಗ್ನಿ ಅನಾಹುತ ಸಂಭವಿಸಿದ್ದು, ಸಮೀಪದ ಸರಕಾರಿ ಸ್ಥಳದ ಅರಣ್ಯಕ್ಕೆ ಬೆಂಕಿ ಹಬ್ಬಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಕೂಡಲೇ ಸ್ಥಳೀಯರು ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ.
ಘಟನೆಯಲ್ಲಿ ನೂರಾರು ಮರಗಳು ನಾಶಗೊಂಡವು. ಸಮೀಪದ ಟ್ರಾನ್ಸಫಾರ್ಮರಿನಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ಬಿದ್ದಿದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ