ಎಳತ್ತೂರು ಗುಡ್ಡೆಗೆ ಆಕಸ್ಮಿಕ ಬೆಂಕಿ

ಗುಡ್ಡೆಗೆ ಬೆಂಕಿ ತಗುಲಿರುವುದು

ಮುಲ್ಕಿ : ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಳತ್ತೂರು-ಶಿಮಂತೂರು ಕುಚ್ಚಿಗುಡ್ಡೆ ಎಂಬಲ್ಲಿ ಗುಡ್ಡೆಗೆ ಅಕಸ್ಮಿಕ ಬೆಂಕಿ ತಗಲಿದ್ದು, ಕೂಡಲೇ ಸ್ಥಳೀಯರು ಸೇರಿ ಬೆಂಕಿ ನಂದಿಸಿದರು. ವಿದ್ಯುತ್ ತಂತಿಯಿಂದ ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗಲಿದೆ ಎಂದು ಸ್ಥಳೀಯ ಪಂಚಾಯತಿ ಸದಸ್ಯ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಬೆಂಕಿ ಗುಡ್ಡೆಗೆ ತಗಲಿ ಧಗಧಗನೆ ಹರಡಲಾರಂಭಿಸಿದ್ದು, ಕೂಡಲೇ ಸ್ಥಳೀಯರು ನೀರು ಹಾಯಿಸಿದರು.

ಗುಡ್ಡೆ ಬದಿಯಲ್ಲಿ ಮನೆಗಳಿದ್ದು ಸ್ಥಳೀಯರ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿ ಹೋಗಿದೆ. ಮುಲ್ಕಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ತಂತಿಯನ್ನು ಪರಿಶೀಲಿಸಿ ದುರಸ್ತಿ ಮಾಡಿದ್ದಾರೆ.