ಧಾಮಸ್ಕಟ್ಟೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ

ಗುಡ್ಡ ಹೊತ್ತಿ ಉರಿಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ಕೋಲ್ಬೆಟ್ಟು ಗುಡ್ಡಕ್ಕೆ ಬೆಂಕಿ ಬಿದ್ದು ಸುಮಾರು 10 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಕೂಡಲೇ ಸ್ಥಳೀಯರು ಬೆಂಕಿ ಆರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಮೂಡುಬಿದಿರೆ ಅಗ್ನಿ ಶಾಮಕ ದಳದವರು ಬೇರೆ ಕಡೆ ಹೋಗಿದ್ದ ಕಾರಣ ಇಲ್ಲಿಗೆ ಬರಲು ಸಾದ್ಯವಾಗಿಲ್ಲ ಎನ್ನಲಾಗಿದೆ.

ಮುಲ್ಕಿ ಕಿನ್ನಿಗೋಳಿ ಪರಿಸರದಲ್ಲಿ ಅನೇಕ ಬೆಂಕಿ ಆಕಸ್ಮಿಕ ಘಟನೆಗಳು ನಡೆದರೆ ಮಂಗಳೂರು ಅಥವಾ ಮೂಡುಬಿದಿರೆ ಅಗ್ನಿಶಾಮಕದಳದವರು ಬರಬೇಕಾಗುತ್ತದೆ. ಅಷ್ಟೊತ್ತಿಗೆ ಸ್ಥಳೀಯರು ಸೇರಿ ಬೆಂಕಿ ನಂದಿಸಿ ಆಗುತ್ತದೆ. ಆದುದರಿಂದ ಕೂಡಲೇ ಬೆಳೆಯುತ್ತಿರುವ ಮುಲ್ಕಿ-ಕಿನ್ನಿಗೋಳಿ ಪರಿಸರಕ್ಕೆ ಇಲ್ಲಿನ ಜನರ ಬಹುಕಾಲದ ಬೇಡಿಕೆಯಾದ ಅಗ್ನಿಶಾಮಕ ದಳದ ಅವಶ್ಯಕತೆ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.