ಗೇರು ತೋಟಕ್ಕೆ ಬೆಂಕಿ

ಅಗ್ನಿ ಶಾಮಕದಳ ಬೆಂಕಿ ಆರಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀರ್ಚಾಲು ಸನಿಹದ ಕಿಳಿಂಗಾರು ಹೊಸಮನೆ ಮಹಾಬಲ ಭಟ್ ಅವರ ಅರ್ಧ ಎಕರೆ ಗೇರು ತೋಟ ಬುಧವಾರ ಸಂಜೆ ಬೆಂಕಿಗಾಹುತಿಯಾಯಿತು. ಸುಮಾರು 50ರಷ್ಟು ಮರಗಳು ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಹಾಗೂ ಊರವರ ಸಹಕಾರದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಯಿತು. ಆಕಸ್ಮಿಕವಾಗಿ ಗೇರು ತೋಟಕ್ಕೆ ಬೆಂಕಿ ಹತ್ತಿಕೊಂಡಿದ್ದು, ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ